ರಾಜ್ಯಪಾಲರಲ್ಲ ರಾಷ್ಟ್ರಪತಿಗಳಿಗೆ ದೂರು ಕೊಡಲಿ – ಹೆಚ್. ವಿಶ್ವನಾಥ್

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ರಾಜಕಾರಣದಲ್ಲಿ ಉತ್ತುಂಗಕ್ಕೆ ಏರಿದವರು ಈ ದೇಶದ ಪ್ರಧಾನಿಯಾಗಿದ್ದವರು ಈ ರಾಜ್ಯದ ಹೆಮ್ಮೆ, ಅವರ ಬಗ್ಗೆ ಪ್ರೀತಂ ಗೌಡ ಲಘುವಾಗಿ ಮಾತನಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್, ದೇವೇಗೌಡರು ರಾಜಕಾರಣದಲ್ಲಿ ಉತ್ತುಂಗಕ್ಕೆ ಏರಿದವರು ಈ ದೇಶದ ಪ್ರಧಾನಿಯಾಗಿದ್ದವರು ಈ ರಾಜ್ಯದ ಹೆಮ್ಮೆ ಅವರ ಬಗ್ಗೆ ಪ್ರೀತಂ ಗೌಡ ಲಘುವಾಗಿ ಮಾತನಾಡಿದ್ದಾರೆ. ಅವರಿಗೆ ಬಗ್ಗೆ ಇಡೀ ದೇಶದಲ್ಲಿ ಗೌರವ ಕೊಡ್ತಾರೆ. ಅದುವಲ್ಲದೇ ಹಾಸನದಲ್ಲಿ ಹುಟ್ಟಿ ಮಣ್ಣಿನ ಮಗ ಎಂದು ಕರೆಸಿಕೊಂಡಿದ್ದಾರೆ ಎಂದರು.

ಇನ್ನು, ಹುಚ್ಚಾಟದಿಂದ ಶಾಸಕ ಪ್ರೀತಂ ಗೌಡ ಲಘುವಾಗಿ ಮಾತನಾಡಿದ್ದು, ಪಕ್ಷ ಯಾವುದೇ ಇರಲಿ ಎಲ್ಲರೂ ಅವರಿಗೆ ಗೌರವ ಕೊಡ್ತಾರೆ. ಬಿಜೆಪಿಯ ಹಿರಿಯ ನಾಯಕರು ಇದನ್ನ ಖಂಡಿಸಬೇಕಿತ್ತು ಆದರೆ ಅದನ್ನ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಇದು ನಿಜಕ್ಕೂ ದುರಂತ ಅನಿಸುತ್ತೆ ಎಂದು ಆಡಳಿತ ಸರ್ಕಾರ ಪರ ಮಾತನಾಡಿದ್ದಾರೆ.

ರಾಜ್ಯಪಾಲರ ಅಲ್ಲ ರಾಷ್ಟ್ರಪತಿಗಳಿಗೂ ಬೇಕಾದರೆ ದೂರು ಕೊಡಲಿ, ಬಿಜೆಪಿ ಶಾಸಕ ಕೊಟ್ಟ ಹೇಳಿಕೆ ನಾವೆಲ್ಲರೂ ಖಂಡಿಸತ್ತೇವೆ ಎಂದು ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.