ಪ್ರೀತಂ ಗೌಡ ತಂದೆ ತಾಯಿಯ ಕಣ್ಣೀರ ಕಥೆ ಕೇಳಿದ್ದೇನೆ: ಯಡಿಯೂರಪ್ಪ

ಈಗ ತಾನೆ ಪ್ರೀತಂ  ಅವರ ತಂದೆ ತಾಯಿಯ ಕಣ್ಣೀರ ಕಥೆ ಕೇಳಿದ್ದೇನೆ. ಪ್ರೀತಮ್‌ಗೌಡ ಜೊತೆ ನಾವಿದ್ದೇವೆ. ಈ‌ ಭರವಸೆಯನ್ನು‌ ಅವರ ಕುಟುಂಬಕ್ಕೆ‌ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಹಾಸನದ ಶಾಸಕ ಪ್ರೀತಮ್‌ಗೌಡ ಮನೆಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಸನದಲ್ಲಿ‌ ಗೂಂಡಾಗಿರಿ ನಡೆಯುತ್ತಿದೆ. ಇದನ್ನ ವಿಧಾನ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ನಾವು ವಿಧಾನಸಭೆಯಲ್ಲಿ 104 ಶಾಸಕರಿದ್ದೇವೆ ಎಂದರು.

ಒರ್ವ ಯುವಕ‌ ಹಾಸನದಲ್ಲಿ ಸರಿಸಮಾನವಾಗಿ‌ ಬೆಳೆಯುತಿದ್ದಾನೆ.ಇ ದನ್ನು‌ ಸಹಿಸದೆ‌ ಗೂಂಡಾಗಿರಿ‌ ನೆಡಿಸಿದ್ದೀರ. ನಾಳೆ ರಾಜ್ಯಪಾಲರನ್ನು‌ ಭೇಟಿ ಯಾಗಲಿದ್ದೇನೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಈ‌ ರೀತಿಯ ಗೂಂಡಾಗಿರಿಯನ್ನು‌ ರಾಜ್ಯದಲ್ಲಿ ಎಲ್ಲಿಯೇ ಆದರೂ ನಾವು ಸಹಿಸುವುದಿಲ್ಲ. ಹಾಸನದಲ್ಲಿ ಇದಕ್ಕಿಂತ ಹತ್ತು ಪಟ್ಟು ಹೆಚ್ಷು ರಾಜಕೀಯ ಮಾಡೋದು ನಮಗೆ ಗೊತ್ತು. ಪ್ರೀತಮ್‌ಗೌಡ ಎಂಬ ಯುವಕ ಬೆಳೆಯುವುದನ್ನು‌ ಸಹಿಸದ ಇದನ್ನು ಮಾಡಿದ್ದಾರೆ ಎಂದರು.

ಪ್ರೀತಮ್ ಮನೆಯ ಮೇಲೆ ದಾಳಿ ಆಗಿದ್ದರೂ ಪೊಲೀಸರು ಕರ್ಥವ್ಯ ನಿರ್ಲಕ್ಷಿಸಿದ್ದಾರೆ. ಪೊಲೀಸರ ವೈಫಲ್ಯ ಇದೆ ,ಇದನ್ನ ನಾನು ಸಹಿಸುವುದಿಲ್ಲ. ಗೃಹ ಸಚಿವ‌ರಾಜನಾಥ್ ಸಿಂಗ್ ಗೆ ಈ‌ ಕುರಿತು ಮನವಿ‌ ಮಾಡುತ್ತೇವೆ. ಕರ್ನಾಟಕದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ‌ ಮಾಡುತ್ತೇವೆ. ನಾಳೆ ರಾಜ್ಯದಲ್ಲಿ ಆಗುವ ಇದರ ಪರಿಣಾಮ ಸರ್ಕಾರ ಎಚ್ಚರಿಕೆಯಿಂದ ಗಮನಿಸಬೇಕು ಎಂದು ಮಾಜಿ ಸಿಎಂ ಬಿ ಎಸ್ ವೈ ಹೇಳಿದರು.