ಯಡಿಯೂರಪ್ಪ ಸೇರಿದಂತೆ ಬಿಜೆಪಿಯ 3 ನಾಯಕರ ಮೇಲೆ ಎಫ್ಐಆರ್ ದಾಖಲು

ಆಪರೇಷನ್ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ನಾಗನಗೌಡ ಪಾಟೀಲ್ ಕಂದಕೂರು ಅವರ ಪುತ್ರ ಹಾಗೂ, ಪ್ರಕರಣದ ರೂವಾರಿ ಶರಣಗೌಡ ಕಂದಕೂರು ಅವರು ಬುಧವಾರ ರಾಯಚೂರು ಎಸ್​ಪಿಗೆ ದೂರು ನೀಡಿದ್ದಾರೆ..

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಭಾಗಿಯಾಗಿರುವ A1 ಆರೋಪಿ ಬಿಎಸ್ ಯಡಿಯೂರಪ್ಪ. A2 ಆರೋಪಿ ಶಿವನಗೌಡ ನಾಯಕ್. A3 ಆರೋಪಿ ಪ್ರೀತಂಗೌಡ. A4 ಆರೋಪಿ ಮರಮಕಲ್ ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆ ಅಡಿ ಎಫ್ ಐಆರ್ IPC -1860, U/S -120B, 504, 34 ಕಲಂ ದಾಖಲಾಗಿದೆ.

ಬಜೆಟ್​ಗೆ ಹಿಂದಿನ ದಿನ, ಅಂದರೆ ಫೆಬ್ರವರಿ 7ರ ರಾತ್ರಿ ದೇವದುರ್ಗಾದಲ್ಲಿ ಯಡಿಯೂರಪ್ಪ, ಶಿವನಗೌಡ ನಾಯಕ ಮತ್ತಿತರರನ್ನು ಭೇಟಿಯಾಗಿ ಮಾತುಕತೆ ನಡೆಸುವಾಗ ಶರಣಗೌಡ ಅವರು ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು.

ಅದರಲ್ಲಿ, ಶರಣುಗೌಡ ಅವರಿಗೆ ತಮ್ಮ ತಂದೆಯನ್ನು ಬಿಜೆಪಿಗೆ ಬರಲು ಒಪ್ಪಿಸಿದರೆ ಶಾಸಕ ಹಾಗೂ ಮಂತ್ರಿಸ್ಥಾನ ಕೊಡುವುದಾಗಿ ಆಮಿಷ ಒಡ್ಡಲಾಯಿತು. ಹಾಗೆಯೇ ಕೋಟಿಗಟ್ಟಲೆ ದುಡ್ಡನ್ನೂ ತಲುಪಿಸುವುದಾಗಿ ಭರವಸೆ ನೀಡಲಾಗಿದ್ದು, ಅದರ ಆಡಿಯೋ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.

Recommended For You

Leave a Reply

Your email address will not be published. Required fields are marked *