ದರ್ಶನ್ ಬರ್ತ್‌ಡೇಗೆ ಫ್ಯಾನ್ಸ್ ಕೊಟ್ರು ಅಕ್ಕಿ-ಬೆಳೆ ಗಿಫ್ಟ್

ಬೆಂಗಳೂರು: ಈ ಬಾರಿ ದರ್ಶನ್ ಬರ್ತ್‌ಡೇಯನ್ನ, ದಚ್ಚು ಫ್ಯಾನ್ಸ್ ಡಿಫ್ರೆಂಟ್‌ ಆಗಿ ಸೆಲೆಬ್ರೇಟ್ ಮಾಡ್ತಿರೋದು ಗೊತ್ತೇ ಇದೆ. ಇನ್ನು ಡಿ ಬಾಸ್ ಆಜ್ಞೆಯಂತೆ ಕೇಕ್, ಹೂವನ್ನೆಲ್ಲ ಬದಿಗಿಟ್ಟು, ನಾನಾ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ದರ್ಶನ್ ಫ್ಯಾನ್ಸ್ ಮೂಟೆ ಮೂಟೆ ಅಕ್ಕಿ ಬೆಳೆ ಗಿಫ್ಟ್ ತಂದಿದ್ದಾರೆ.

ಇನ್ನು ಈ ಮೊದಲು ಹೇಳಿದಂತೆ ನೀವು ತಂದುಕೊಡುವ ಅಕ್ಕಿ ಬೆಳೆಯನ್ನು ಅನಾಥಾಶ್ರಮ, ವೃದ್ಧಾಶ್ರಮ, ಸಿದ್ಧಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದ ದರ್ಶನ್, ತಮ್ಮ ಜವಾಬ್ದಾರಿ ನಿರ್ವಹಿಸಲು ಮುಂದಾಗಿದ್ದಾರೆ.

ತಂದೆಯ ಸಮಾನರಾಗಿದ್ದ ಅಂಬರೀಷ್ ನಿಧನರಾಗಿದ್ದ ಹಿನ್ನೆಲೆ, ಈ ಬಾರಿ ಕೇಕ್ ಕತ್ತರಿಸುವುದು, ಸಂಭ್ರಮಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡುವುದು ಬೇಡ ಎಂದು ದರ್ಶನ್ ಹೇಳಿದ್ದು, ದರ್ಶನ್ ಮಾತಿಗೆ ಬೆಲೆ ಕೊಟ್ಟ ಅಭಿಮಾನಿಗಳು ಅಕ್ಕಿ ಬೆಳೆ ತಂದುಕೊಟ್ಟಿದ್ದಾರೆ.