ಮಾಜಿ ಸಿಎಂ ಯಡಿಯೂರಪ್ಪ ಮುಂದೆ ಕಣ್ಣೀರು ಹಾಕಿದ ಪ್ರೀತಂಗೌಡ ತಾಯಿ

ಹಾಸನ: ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕರು ಪ್ರೀತಂಗೌಡ ಮನೆಗೆ ಭೇಟಿ ನೀಡಿ, ಪ್ರೀತಂ ತಾಯಿ ನಾಗರತ್ನ ಅವರಿಗೆ ಸಾಂತ್ವನ ಹೇಳಿದರು.
ಹಾಸನದ ವಿದ್ಯಾನಗರದ ಪ್ರೀತಂ ಮನೆಗೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಸಿ.ಟಿ.ರವಿ ಸೇರಿದಂತೆ 15 ಬಿಜೆಪಿ ಶಾಸಕರು ಆಗಮಿಸಿದರು.

ಈ ವೇಳೆ ಯಡಿಯೂರಪ್ಪ ಮುಂದೆ ಕಣ್ಣೀರು ಹಾಕಿದ ನಾಗರತ್ನ, ನನ್ನ ಮಗನಿಗೆ ಕಷ್ಟ ಕೊಡುತ್ತಿದ್ದಾರೆ. ಕಲ್ಲು ಹೊಡೆದಿದ್ದಾರೆ. ಕಾರಿಗೆ ಕಲ್ಲು ಹೊಡೆದಿದ್ದಾರೆ. ನಮ್ಮ ಬೆಂಬಲಕ್ಕೆ ನಿಲ್ಲಿ ಸರ್ ಎಂದು ಕೈ ಮುಗಿದು ಅಂಗಲಾಚಿದ್ದಾರೆ. ಅಲ್ಲದೇ ನಮ್ಮ ಮನೆ ಮುಂದೇ ಧಿಕ್ಕಾರ ಹಾಕಿದ್ದಾರೆ, ಅವಾಚ್ಯ ಪದ ಬಳಕೆ ಮಾಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಹೆದರುವ ಅವಶ್ಯಕತೆ ಬೇಡ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.