ಈ ಅತೃಪ್ತ ಶಾಸಕನಿಗೆ ಮೈಚಳಿ ಬಿಡಿಸಿದ ಸಿದ್ದರಾಮಯ್ಯ.!

ಬೆಂಗಳೂರು: ‘ರೀ ಮಿಸ್ಟರ್ ಜಾಧವ್ ಏನ್ರೀ ನೀವು ಎಜುಕೇಟೆಡ್, ನಿಮಗೆ ಎಲ್ಲವೂ ಗೊತ್ತಿದೆ. ನಿಮ್ಮನ್ನ ನಾನು ತುಂಬಾ ನಂಬಿದ್ದೆ ಆದ್ರೆ, ನೀವು ನಂಬಿಕೆ ಕಳೆದು ಕೊಂಡ್ರಿ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಉಮೇಶ್ ಜಾಧವ್ ಗೆ  ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿಧಾನಸೌಧದಲ್ಲಿ ಕಲಾಪ ಮುಂದೂಡುತ್ತಿದ್ದಂತೆ ಸಿದ್ದರಾಮಯ್ಯ ಭೇಟಿ ಮಾಡಲು ಉಮೇಶ್ ಜಾಧವ್ ಮುಂದಾದರು.  ಪ್ರತ್ಯೇಕವಾಗಿ ಭೇಟಿ ಮಾಡಿ ಗೈರಾದ ಬಗ್ಗೆ ಮನವರಿಕೆ ಮಾಡಿ ಕೊಡಲು‌ ಜಾಧವ್ ಪ್ರಯತ್ನಿಸಿದರು.

ಶಾಸಕ ಉಮೇಶ್ ಜಾಧವ್ ಮುಖ ‌ನೋಡುತ್ತಿದ್ದಂತೆ ಕೆಂಡಾಮಂಡಲರಾದ ಸಿದ್ದರಾಮಯ್ಯ,  ‘ನಿಮಗೇನಾದರೂ ನೈತಿಕತೆ ಇದೆಯಾ ಹೇಳಿ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಉಮೇಶ್ ಜಾಧವ್ ‘ಆಗ ಕ್ಷೇತ್ರದಲ್ಲಿ ಕೆಲ ಸಮಸ್ಯೆಗಳಿದ್ದವು, ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದರು. ಇದನ್ನೆಲ್ಲಾ ನಿಮಗೆ ಹೇಳಲು ಪ್ರಯತ್ನಿಸಿದೆ ಸರ್’ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಸಿದರು.

‘ನೋಡ್ರಿ..ನೀವು ಏನೇ ಹೇಳಿ, ಈಗ ಮಾಡಿರೋದು ಸರಿಯಲ್ಲ, ವಿದ್ಯಾವಂತರಾಗಿ ಹೀಗೆ ಮಾಡಬಾರದಾಗಿತ್ತು’ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ಇನ್ನು, ಸಿದ್ದರಾಮಯ್ಯ ಹೊರಗೆ ತೆರಳುವವರೆಗೂ ಜೊತೆಯಲ್ಲೇ ಬರುತ್ತಿದ್ದ ಉಮೇಶ್ ಜಾಧವ್, ಕೆಂಗಲ್ ಗೇಟ್ ಬಳಿ ಕ್ಯಾಮರಾಗಳನ್ನ ನೋಡುತ್ತಿದ್ದಂತೆ ಮತ್ತೆ ಒಳಗಡೆ ಓಡಿದರು.