ದೇವೇಗೌಡರ ಬಗ್ಗೆ ಪ್ರೀತಂಗೌಡ ತಾಯಿ ಹೇಳಿದ್ದೇನು..?

ಹಾಸನ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ತಾಯಿ ನಾಗರತ್ನ ಪ್ರತಿಭಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ನನಗೆ ಲೊ ಬಿಪಿ ಇದೆ. ಶುಗರ್ ಇದೆ, ಈ ಘಟನೆಯಿಂದ ನನಗೆ ಆಘಾತವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ ನನ್ನ ಮಗ ಇಲ್ಲಿರುವ ಟೈಮಲ್ಲಿ ಇಂಥ ಘಟನೆ ನಡೆದಿರುವುದು ಅಚ್ಚರಿ ತಂದಿದೆ. ನನ್ನ ಮನೆಗೆ ಕಲ್ಲು ಬಿದ್ದಿದೆ, ಕಾರಿಗೂ ಸಹ ಕಲ್ಲು ತೂರಲಾಗಿದೆ. ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ. ಆಡಿಯೋ ವೀಡಿಯೋ ಬಗ್ಗೆ ನನ್ನ ಮಗ ತಪ್ಪು ಮಾಡಿದ್ದರೆ ತಿದ್ದಿಕೊಳ್ಳಲಿ ಎಂದಿದ್ದಾರೆ.

ಇನ್ನು ಈ ಪ್ರತಿಭಟನೆಯಿಂದ ನನ್ನ ಮಗನಿಗೇನು ನಷ್ಟವಾಗುವುದಿಲ್ಲ. ಅವನು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಾನೆ. ದೇವೇಗೌಡರ ಬಗ್ಗೆ ನಮಗೆ ಗೌರವ ಇದೆ. ನಮ್ಮ ತಂದೆ ಸ್ಥಾನದಲ್ಲಿ ನೋಡುತ್ತೇವೆ ಎಂದು ಪ್ರೀತಂಗೌಡ ತಾಯಿ ನಾಗರತ್ನ ಹೇಳಿದ್ದಾರೆ.