ಪ್ರೀತಂ ಗೌಡ ಮೇಲೆ ಹಲ್ಲೆ ಈ ಇಬ್ಬರು ರಾಜಕಾರಣಿಗಳ ಕೈವಾಡ – ಯೋಗಾ ರಮೇಶ್

ಹಾಸನ: ಹಾಸನದಲ್ಲಿ ಗೂಂಡಾ ಸಂಸ್ಕೃತಿ ನಡೆಯುತ್ತಿದೆ ಪೊಲೀಸರು ಯಾಕೆ ಪ್ರತಿಭಟನೆ ಮಾಡಲು ಅವಕಾಶ ಕೊಟ್ರು..? ಎಂದು ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಪ್ರಶ್ನಿಸಿದರು.

ಹಾಸನದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಯೋಗಾ ರಮೇಶ್,  ಮೊಸ್ಟಲಿ ಜೆಡಿಎಸ್ ನವರು ಪ್ರತಿಭಟನೆ ಮಾಡಲಿಕ್ಕೆ ಅವಾಕಾಶ ಕೊಟ್ಟಿಲ್ಲ ಅನಿಸುತ್ತೆ,  ಈ ಗೂಂಡಾ ಸಂಸ್ಕೃತಿ ಸಿಎಂ ಕುಮಾರಸ್ವಾಮಿ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಇಂತಹ  ಘಟನೆ ನಡೆದಿದೆ ಎಂದು ಆರೋಪ ಮಾಡಿದ್ದಾರೆ.

ಇನ್ನು, ಶಾಸಕರ ಮನೆ ಮುಂದೆ ಪ್ರತಿಭಟಿಸಲು ಅವಾಕಾಶ ಕೊಟ್ಟು , ಪೋಲಿಸರು ವಿಫಲರಾಗಿದ್ದಾರೆ. ಪೋಲಿಸರು ಎಚ್ಚೆತ್ತುಕೊಂಡಿದ್ದರೇ ಇಂತಹ ಘಟನೆ ನಡೆಯುತ್ತಿರಲಿಲ್ಲ,  ಪ್ರೀತಮ್ ತಾಯಿ ನಾಗರತ್ನ  ಅವರಿಗೂ ಸಂತ್ವಾನ ಹೇಳಿದ್ದೇನೆ. ಈ ಘಟನೆಯನ್ನು ನಮ್ಮ ನಾಯಕರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ತಿರ್ಮಾನ ತೆಗೆದು ಕೊಳ್ಳುತ್ತೇವೆ ಎಂದು ಯೋಗಾ ರಮೇಶ್ ತಿಳಿಸಿದ್ದಾರೆ.