ಬಿಜೆಪಿಯವರು ನನಗೆ ಮುಖ್ಯಮಂತ್ರಿ ಸ್ಥಾನ ಕೊಡ್ತಾರಾ..?- ನಾರಾಯಣಗೌಡ

ಬೆಂಗಳೂರು: ಇಂದು ಸದನಕ್ಕೆ ಹಾಜರಾಗಿದ್ದ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ, ಟಿವಿ5 ಜೊತೆ ಮಾತನಾಡಿದ್ದು, ಆಪರೇಷನ್ ಕಮಲದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಬಿಜೆಪಿಗೆ ಹೋದ್ರೆ ನನ್ನನ್ನು ಮುಖ್ಯಮಂತ್ರಿ ಮಾಡ್ತಾರಾ..? ನನ್ನನ್ನು ಆಪರೇಷನ್ ಮಾಡುವ ಶಕ್ತಿ ಬಿಜೆಪಿಗಿಲ್ಲ. ನಾನು ಮಹಾರಾಷ್ಟ್ರಕ್ಕೆ ಹೋಗೋದು ನನ್ನ ವ್ಯವಹಾರಗಳನ್ನು ನೋಡಿಕೊಳ್ಳೋಕ್ಕೆ, ಅಲ್ಲಿ ಹೋಟೇಲ್, ಕನ್‌ಸ್ಟ್ರಕ್ಷನ್ ಕಂಪನಿ ಇದೆ.

ಈ ವ್ಯವಹಾರಗಳನ್ನು ನೋಡಿಕೊಳ್ಳೋಕ್ಕೆ ಮಹಾರಾಷ್ಟ್ರಕ್ಕೆ ಹೋಗುತ್ತಿರುತ್ತೇನೆ. ಅಲ್ಲಿ ನನ್ನ ಸ್ನೇಹಿತರಿದ್ದಾರೆ. ಇದಕ್ಕೆಲ್ಲ ಆಪರೇಷನ್ ಎಂದು ಹೇಳುವುದು ಸರಿಯಲ್ಲ. ನನ್ನನ್ನು ಬಿಜೆಪಿ ನಾಯಕರು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.