ಪಕ್ಷೇತರ ಶಾಸಕರನ್ನ ಸೆಳೆಯುವಲ್ಲಿ ಕೈ ನಾಯಕರು ಸಕ್ಸಸ್: ಸಿದ್ದರಾಮಯ್ಯಗೆ ಡಿಕೆಶಿ ಸಾಥ್

ಬೆಂಗಳೂರು: ಪಕ್ಷೇತರ ಶಾಸಕರನ್ನ ಸೆಳೆಯುವಲ್ಲಿ ಕೈ ನಾಯಕರು ಸಕ್ಸಸ್ ಆಗಿದ್ದಾರೆ. ಬಿಜೆಪಿ ಆಪರೇಷನ್ ತೆಕ್ಕೆಯಲ್ಲಿದ್ದವರನ್ನ ತಮ್ಮ ಬಳಿ ಕರೆಸಿಕೊಂಡ ಕಾಂಗ್ರೆಸ್ಸಿಗರು, ಪಕ್ಷೇತರ ಶಾಸಕ ನಾಗೇಶ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಮನವೊಲಿಸಿದ್ದು, ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಾಗೇಶ್, ಕಾಂಗ್ರೆಸ್ ಸಹ ಸದಸ್ಯರಾಗಲು ಮಾತುಕತೆ ನಡೆಸಿದರು.

ಪತ್ರದ ಮೂಲಕ ಸಿದ್ದರಾಮಯ್ಯ ಜೊತೆ ನಾಗೇಶ್ ಚರ್ಚಿಸಿದ್ದು, ಇನ್ನು ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ್ ಸಾಥ್ ನೀಡಿದ್ದಾರೆ.