ನನ್ನನ್ನು ಕೊಲ್ಲಲು ಸಿಎಂ, ರೇವಣ್ಣ ಜೆಡಿಎಸ್ ಕಾರ್ಯಕರ್ತರನ್ನ ಕಳುಹಿಸಿದ್ದಾರೆ – ಪ್ರೀತಂ ಗೌಡ

ಬೆಂಗಳೂರು: ಇಂದು ಸದನಕ್ಕೆ ಬರುವಾಗ ಕೆಲವರು ನನ್ನ ಮತ್ತು ನನ್ನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಈ ಬಗ್ಗೆ ಪ್ರತಿಕ್ರಿಸಿದ ಅವರು, ನನ್ನನ್ನು ಕೊಲೆ ಮಾಡೋಕೆ ಸಿಎಂ, ರೇವಣ್ಣ ಜೆಡಿಎಸ್ ಗುಂಡಾ ಕಾರ್ಯಕರ್ತರನ್ನ ಕಳುಹಿಸಿದ್ದಾರೆ. ನಮ್ಮ ತಂದೆ ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ನಮ್ಮ ಕಾರ್ಯಕರ್ತನಿಗೆ ಕಲ್ಲು ಎಸೆದಿದ್ದು, ಇದರಿಂದ ನಮ್ಮ ಕಾರ್ಯಕರ್ತನಿಗೆ ಗಾಯವಾಗಿದೆ ಎಂದು ವಿವರಿಸಿದರು.

ನಾನು ನಿಮ್ಮ ಗೂಂಡಾ ಪ್ರವೃತ್ತಿಗೆ ಹೆದರುವವನಲ್ಲ ನನ್ನ ಕಾರ್ಯಕರ್ತರಿಗೆ ಗೂಂಡಾ ಪ್ರವೃತ್ತಿಗೆ ಹೋಗದಂತೆ ಮನವಿ ಮಾಡ್ತೇನೆ. ಇದಕ್ಕೆ ನಾನು ಹೆದರುವುದಿಲ್ಲ ಪಕ್ಷ ನನ್ನ ಬೆಂಬಲಕ್ಕೆ ಇರಲಿದೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.