ಆಪರೇಷನ್ ಕಮಲ ಆಡಿಯೋ ತನಿಖೆ ಇವರಿಂದ ಮಾಡಿಸ್ತಾರಂತೆ..!

ಬೆಂಗಳೂರು: ಆಡಿಯೋ ತನಿಖೆಯನ್ನು ಎಸ್‌ಐಟಿಗೆ ವಹಿಸುವ ವಿಚಾರದ ಕುರಿತು ವಿಧಾನಸೌಧದಲ್ಲಿ ಕುಮಾರಸ್ವಾಮಿ ಮಾತನಾಡಿದ್ದು, ಆಪರೇಷನ್ ಕಮಲಕ್ಕೆ ಅಂತ್ಯವಾಡಬೇಕಿದೆ. ಕಳೆದ ಹತ್ತು ವರ್ಷದಿಂದ ಶಾಸಕರು ಖರೀದಿಗೆ ಆಗ್ತಿದ್ದಾರೆ. ಆಪರೇಷನ್‌ನಿಂದ ಶಾಸಕರು ಖರೀದಿ ಆಗ್ತಿದ್ದಾರೆಂಬ ಮಾತುಗಳು ಸಾಕಷ್ಟು ಕೇಳಿ ಬರ್ತಿವೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪ್ರಮಾಣಿಕ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕೆಂದು ಹೇಳಿದ್ದಾರೆ.

ಇನ್ನು ಆಪರೇಷನ್ ಕಮಲ ಆಡಿಯೋ ಬಗ್ಗೆ ಮಾತನಾಡಿದ ಹೆಚ್ಡಿಕೆ, ಆಮೇಲೆ ನನ್ನನ್ನು ಸೇರಿದಂತೆ ಯಾರು ಕೂಡ ಒತ್ತಡ ಬರದ ರೀತಿ ಕ್ರಮ ತೆಗೆದುಕೊಳ್ತೇವೆ. ಈ ಪ್ರಕರಣವನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗೇ ಹೋಗ್ತೇವೆ ಎಂದಿದ್ದಾರೆ.

ಇನ್ಮುಂದೆ ಯಾವುದೇ ಈ ರೀತಿಯ ಪ್ರಕರಣಗಳು ಮರುಕಳಿಸಬಾರದು. ಶಾಸಕರು ಮಾರಾಟದ ಸರುಕು ಆಗಿದ್ದಾರೆ. ಹೀಗಾಗಿ ಇದಕ್ಕೆ ಫುಲ್ ಸ್ಟಾಪ್ ಹೇಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದು, ಎಸ್ಐಟಿಯನ್ನು ಪ್ರಸ್ತಾಪ ಮಾಡದೇ ಪ್ರಾಮಾಣಿಕ ಅಧಿಕಾರಿಗಳಿಂದ ತನಿಖೆ ಮಾಡಿಸುವುದಾಗಿ ಸಿಎಂ ಹೇಳಿದ್ದಾರೆ.

Recommended For You

Leave a Reply

Your email address will not be published. Required fields are marked *