ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಪ್ರೀತಮ್‌ಗೌಡಗೆ ಖಡಕ್ ವಾರ್ನಿಂಗ್

ಬೆಂಗಳೂರು: ದೇವೇಗೌಡರ ಬಗ್ಗೆ ಹಾಸನ ಶಾಸಕ ಪ್ರೀತಂಗೌಡ ಹಗುರವಾಗಿ ಮಾತನಾಡಿದ್ದು, ಪ್ರೀತಂಗೌಡಗೆ ಸಿ.ಎಸ್.ಪುಟ್ಟರಾಜು ವಾರ್ನಿಂಗ್ ನೀಡಿದ್ದಾರೆ.

ಪ್ರತಿಭಟನೆ ಬಗ್ಗೆ ಮಾತನಾಡಿದ ಸಿ.ಎಸ್.ಪುಟ್ಟರಾಜು, ಪ್ರೀತಂಗೌಡ ನಿನ್ನೆ ಮೊನ್ನೆ ತಾನೇ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಬಹಳ ದಶಕಗಳ ರಾಜಕೀಯ ಇತಿಹಾಸವಿದೆ. ಇಂಥ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಆಗ ದೇವೇಗೌಡರ ಕಟ್ಟಾ ಅಭಿಮಾನಿಗಳು ಅವರ ಮನೆ ಬಾಗಿಲಿಗೆ ಹೋಗಿದ್ದು ಸತ್ಯ. ನಾವೇನು ಪ್ರತಿಭಟನೆಯನ್ನ ಸಮರ್ಥಿಸಿಕೊಳ್ಳುತ್ತಿಲ್ಲವೆಂದು ಹೇಳಿದ್ದಾರೆ.

ಅಲ್ಲದೇ ಪ್ರೀತಂಗೌಡರಿಗೆ ಎಚ್ಚರಿಕೆ ಕೊಡ್ತೇನೆ. ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಡಬೇಡಿ. ಎಂಥೆಂತವರೋ ಈ ಬಗ್ಗೆ ಮಾತನಾಡಿ ಸುಟ್ಟುಹೋಗಿದ್ದಾರೆ. ಈಗಾಗಲೇ ಸದನದಲ್ಲಿ ಬಿಜೆಪಿಯವರು ವಿಲವಿಲ ಒದ್ದಾಡ್ತಿದ್ದಾರೆ. ಅವರ ಪ್ರಧಾನಮಂತ್ರಿಯೇ ರಾಜ್ಯ ನಾಯಕರ ಮುಖ ನೋಡದೇ ವಾಪಸ್ ಹೋಗಿದ್ದಾರೆ. ಹಾಸನದಲ್ಲಿ ಯಾವ ಘಟನೆ ಕೂಡ ನಡೆಯದಂತೆ ಪೊಲೀಸರಿಗೆ ಸಿಎಂ ಈಗಾಗಲೇ ಸೂಚನೆ ಕೊಟ್ಟಾಗಿದೆ ಎಂದು ಹೇಳಿದ್ದಾರೆ.