ಭರಾಟೆ ಶೂಟಿಂಗ್ ಸ್ಪಾಟ್‌ನಲ್ಲಿ ಮಹೇಶ್ ಬಾಬು ಪ್ರತ್ಯಕ್ಷ..!

ಹೈದರಾಬಾದ್: ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹುನಿರೀಕ್ಷಿತ ಚಿತ್ರ ಭರಾಟೆ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಹೈದರಾಬಾದ್‌ನಲ್ಲಿ ನಡೆದ ಶೂಟಿಂಗ್ ವೇಳೆ ಮುರುಳಿ, ಪ್ರಿನ್ಸ್ ಮಹೇಶ್‌ಬಾಬುರನ್ನ ಮೀಟ್ ಮಾಡಿದ್ದಾರೆ.

ಸದ್ಯ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಭರಾಟೆ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಅಲ್ಲಿಯೇ ಪ್ರಿನ್ಸ್ ಮಹೇಶ್‌ ಬಾಬು ಕೂಡ ಶೂಟಿಂಗ್‌ಗಾಗಿ ಹಾಜರಿದ್ದರು. ಈ ವೇಳೆ ಇಬ್ಬರೂ ಭೇಟಿಯಾಗಿದ್ದು, ನಟ ಸಾಯಿ ಕುಮಾರ್ ಕೂಡ ಅವರ ಜೊತೆ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಮೂವರು ಸೌತ್ ಸ್ಟಾರ್ಸ್ ಕನ್ನಡ ಚಿತ್ರರಂಗದ ಮಾರುಕಟ್ಟೆ ಬಗ್ಗೆ ಸೇರಿ, ಹಲವು ಸೌತ್ ಸಿನಿಮಾಗಳ ಕುರಿತಾಗಿ ಮಾತುಕತೆ ನಡೆಸಿದ್ದಾರೆ.