ಇದೆಲ್ಲದರ ಮಧ್ಯೆ ಸಿದ್ದರಾಮಣ್ಣ, ನಾನು ಕಲ್ಲು ಬಂಡೆ ಥರ ಇದ್ದೇವೆ- ಸಿಎಂ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ರಿಲೀಸ್ ಮಾಡಿದ ಸಿಡಿ ಬಗ್ಗೆ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಈ ಕುರ್ಚಿ ಶಾಶ್ವತ ಅಲ್ಲ. ನಾನು ಇಲ್ಲಿ ಗೂಟ ಹೊಡ್ಕೊಂಡು ಕೂತಿಲ್ಲ. ದೇಶದ ಪ್ರಧಾನಿ ಹುದ್ದೆಯನ್ನೇ ಬಿಟ್ಟು ಬಂದ ಕುಟುಂಬ ನಮ್ಮದು. ನಾವು ಚುನಾವಣೆ ನಡೆಯುವ ಸಂದರ್ಭದಲ್ಲಿ ಪರಸ್ಪರ ಹೋರಾಟ ಮಾಡಿದ್ವಿ ಎಂದು ಹೇಳಿದ್ದಾರೆ.

ಅಲ್ಲದೇ ಹಲವಾರು ವಿಷಯಗಳನ್ನು ನಾನು ಸಹಿಸಿಕೊಂಡಿದ್ದೇನೆ ಎಂದು ಹೇಳಲು ಕಾರಣ ಕಾಂಗ್ರೆಸ್‌ನ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ರು. ಅವರಿಗೆ ಯಾವ ಅಪಚಾರ ಆಗ್ಬಾರ್ದು ಅಂತಲೇ ಸಹಿಸಿಕೊಂಡಿದ್ದೇನೆ . ಇದೆಲ್ಲದರ ಮಧ್ಯೆ ಸಿದ್ದರಾಮಣ್ಣ, ನಾನು ಕಲ್ಲು ಬಂಡೆ ಥರ ಇದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೇ, ಬಿಜೆಪಿ ರಿಲೀಸ್ ಮಾಡಿದ ವೀಡಿಯೋದಲ್ಲಿ ನನ್ನ ತಪ್ಪು ಇದೆ ಎಂದು ಬಿಂಬಿಸಲಾಗ್ತಿದೆ. ನನ್ನಿಂದ ತಪ್ಪಾಗಿದ್ರೂ ತನಿಖೆ ಆಗ್ಲಿ. ನಾನೇನಾದ್ರು ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲು ಸಿದ್ಧ. ಕಾನೂನಾತ್ಮಕವಾಗಿ ಯಾವ ಕ್ರಮ ತೆಗೆದುಕೊಂಡ್ರು ನನಗೆ ಸಹಮತ ಇದೆ ಎಂದು ಹೇಳಿದ್ದಾರೆ.