ದಚ್ಚು ಫ್ಯಾಮಿಲಿ ಗಾಸಿಪ್‌ಗೆ ತೆರೆ ಎಳೆದ ಬಿ.ಸುರೇಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಮಧ್ಯೆ ಬಿರುಕು ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಈಗಾಗಲೇ ವಿಜಯಲಕ್ಷ್ಮಿ ಮತ್ತು ದಚ್ಚು ಸಿಟ್ಟನ್ನೆಲ್ಲ ಮರೆತು ಅನ್ಯೊನ್ಯವಾಗಿದ್ದಾರೆಂದು ಹಲವರಿಗೆ ಗೊತ್ತಿಲ್ಲ.ಇಬ್ಬರ ಮಧ್ಯೆ ಈಗಲೂ ಕಿತ್ತಾಟವಿದೆ ಎಂದು ಹಲವರು ತಿಳಿದಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಬಿ.ಸುರೇಶ್, ವಿಜಯಲಕ್ಷ್ಮಿ ತಮ್ಮ ಪುತ್ರ ವಿನೀಶ್‌ನನ್ನು ಕರೆದುಕೊಂಡು ಆಗಾಗ ಯಜಮಾನ ಚಿತ್ರದ ಶೂಟಿಂಗ್ ಸ್ಪಾಟ್‌ಗೆ ಆಗಮಿಸುತ್ತಿದ್ದು, ದರ್ಶನ್ ವಿಜಯಲಕ್ಷ್ಮಿ ತುಂಬಾ ಅನ್ಯೋನ್ಯವಾಗಿದ್ದಾರೆ ಎಂದು ಹೇಳಿದರು.

ಅಲ್ಲದೇ ದಚ್ಚು ಮತ್ತು ವಿಜಯಲಕ್ಷ್ಮಿ ಜಗಳವಾಡಿಕೊಂಡಿದ್ದು ನಿಜವಿರಬಹುದು, ಗಂಡ ಹೆಂಡತಿ ಅಂದಮೇಲೆ ಒಂದು ಮಾತು ಬರತ್ತೆ ಹೋಗತ್ತೆ. ಆದ್ರೆ ಈ ಇಬ್ಬರೂ ಹೊಂದಿಕೊಂಡಿದ್ದಾರೆ ಎಂದು ಹೇಳುವ ಮೂಲಕ ದಚ್ಚು ಬಗ್ಗೆ ಇದ್ದ ಗಾಸಿಪ್‌ಗೆ ಬಿ.ಸುರೇಶ್ ತೆರೆಎಳೆದಿದ್ದಾರೆ.