ಅತೃಪ್ತ ಶಾಸಕರ ತಪ್ಪಿಗೆ ಸಿದ್ದರಾಮಯ್ಯ ಕೊಟ್ರು ಪವರ್ ಫುಲ್ ಶಾಕ್..!

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದಾಗ ಸಿಬಿಐ ಚೋರ್ ಬಚಾವೋ ಸಂಸ್ಥೆ ಅಂತಿದ್ರು  ಈಗ ಅವ್ರೇ ಅಧಿಕಾರದಲ್ಲಿ ಇದ್ದಾಗ ಏನ್ ಹೇಳ್ತಾರೆ ಇದೆಲ್ಲಾ ಸಾಂವಿಧಾನಿಕ ಸಂಸ್ಥೆ, ನಂಬಿಕೆ ಇರ್ಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸ್ಪೀಕರ್  ರಮೇಶ್ ಕುಮಾರ್ ದೂರು ಸಲ್ಲಿಸುವುದಕ್ಕೂ ಮುಂಚೆ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ ೫ ಪ್ರಕರಣಗಳನ್ನ ಸಿಬಿಐಗೆ  ಕೊಟ್ಟಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ‌ ಇರ್ಲಿಲ್ಲ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇರಬೇಕು ಎಂದ ಸಿದ್ದರಾಮಯ್ಯ ಅತೃಪ್ತ ಶಾಸಕರ ವಿರುದ್ಧ ಅನರ್ಹಗೊಳಿಸಲು ದೂರನ್ನ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.