ಸಿಎಂ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ರಾ..?

ಬೆಂಗಳೂರು: ಸಿಎಂ ಕುಮಾರಸ್ವಾಮಿಗೆ ರೇಣುಕಾಚಾರ್ಯ ಸವಾಲ್ ಹಾಕಿದ್ದು, ಯಡಿಯೂರಪ್ಪ ಸರ್ಕಾರವಿದ್ದಾಗ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ದರೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಏಳು ತಿಂಗಳಿನಿಂದ ಬಿಜೆಪಿ ಅಸ್ತಿರ ಮಾಡಲು ಹೊರಟಿದೆ ಅಂತೀರ, 2008ರಲ್ಲಿ ಯಡಿಯೂರಪ್ಪ ಸರ್ಕಾರ ಅಸ್ತಿರ ಮಾಡಲು ಪ್ರಯತ್ನಿಸಿದವರ್ಯಾರು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ಗೋವಾದ ತಾಜ್ ಎಕ್ಸಾಟಿಕ್ ಹೊಟೇಲ್‌ಗೆ ಬಂದಿದ್ದು ಯಾರು..?ನಿಮಗೆ ಯಾರು ಆಗ ತಾಜ್ ಎಕ್ಸಾಟಿಕ್ ಹೊಟೇಲ್‌ಗೆ ಬಾ ಅಂದಿದ್ದು..?ಬಲ್ಡೋಟಾ ಕಂಪೆನಿ ಮೂಲಕ ಹಣ ಸಂಗ್ರಹಿಸಿದ್ದು ಯಾಕೆ..? ಯಾಕೆ ಹಣ ತಂದ್ರಿ, ಎಷ್ಟು ಹಣ ತಂದಿದ್ರಿ ಗೋವಾಗೆ..? ಬಲ್ಡೋಟಾ ಕಂಪೆನಿ ಮೂಲಕ ಹಣ ಸಂಗ್ರಹಿಸಿದ್ದು ಯಾಕೆ..?ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.