ಚಿರಂಜೀವಿ ಸರ್ಜಾಗೆ ಸಿಕ್ತು ಅಪ್ಪು- ರಾಖಿ ಭಾಯ್ ಸಾಥ್..!

ಕಾದಂಬರಿ ಆಧರಿತ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ಟಿ. ಎಸ್ ನಾಗಾಭರಣ ಮತ್ತೊಂದು ಅದ್ಭುತ ಕಾದಂಬರಿಯನ್ನ ಸಿನಿಮಾ ರೂಪದಲ್ಲಿ ಕನ್ನಡ ಚಿತ್ರರಸಿಕರ ಮುಂದಿಡ್ತಿದ್ದಾರೆ.. ಸರ್ಜಾ ಕುಟುಂಬದ ಕುಡಿ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿರೋ ಆ ಸಿನಿಮಾ ಮುಹೂರ್ತ ಭಾಗ್ಯ ಖಂಡಿದೆ.

‘ಜುಗಾರಿ ಕ್ರಾಸ್’ನಲ್ಲಿ ನಿಂತ ಯುವ ಸಾಮ್ರಾಟ್ ಚಿರು ..!
ಚಿರಂಜೀವಿ ಸರ್ಜಾಗೆ ಸಿಕ್ತು ಅಪ್ಪು- ರಾಖಿ ಭಾಯ್ ಸಾಥ್..!

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಸಿಂಗನಾಗಿ ಮಾಸ್ ಅವತಾರ ತಾಳಿರೋ ಬೆನ್ನಲ್ಲೇ, ಮತ್ತೊಂದು ಕ್ಲಾಸ್ ಸಿನಿಮಾಕ್ಕೆ ಸೈನ್ ಮಾಡಿದ್ದಾರೆ..ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಆಕ್ಷನ್ ಕಟ್ನಲ್ಲಿ ಮೂಡಿ ಬರ್ತಿರೋ ಜುಗಾರಿ ಕ್ರಾಸ್ ಚಿತ್ರದಲ್ಲಿ ಚಿರು ನಟಿಸುತ್ತಿದ್ದಾರೆ.. ಈ ಚಿತ್ರದ ಅದ್ದೂರಿ ಮುಹೂರ್ತ ಕಾರ್ಯಕ್ರಮದಲ್ಲಿ ಯುವ ಸಾಮ್ರಾಟ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಶುಭ ಹಾರೈಸಿದ್ರು.

ಅಲ್ಲಮ ಪ್ರಭು, ಕಾನೂರಾಯಣ ಚಿತ್ರದ ನಂತರ ಟಿ. ಎಸ್ ನಾಗಾಭರಣ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.. ಈ ಸಿನಿಮಾ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವ್ರ ಜುಗಾರಿ ಕ್ರಾಸ್ ಕಾದಂಬರಿ ಆಧರಿಸಿದ್ದು, ಅದೇ ಟೈಟಲ್ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.. ಕಡ್ಡಿಪುಡಿ ಚಂದ್ರು ಜುಗಾರಿ ಕ್ರಾಸ್ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದು, ವಾಸುಕಿ ವೈಭವ್ ಸಂಗೀತ, ಹೆಚ್. ಸಿ ವೇಣು ಛಾಯಾಗ್ರಹಣ ಇರಲಿದೆ.

ಕಾದಂಬರೀ ಆಧಾರಿತ ಸಿನಿಮಾಗಳು ಬಿಡುಗಡೆಯಾದ ನಂತರ ವಿವಾದವನ್ನು ಸೃಷ್ಠಿಸಿವೆ. . ಜುಗಾರಿ ಕ್ರಾಸ್ ಸಹ ಅದೇ ರೀತಿ ವಿವಾದಕ್ಕೆ ಎಡೆ ಮಾಡಿ ಕೊಡುತ್ತಾ ..? ಮೂಲ ಕಥೆಗೆ ಧಕ್ಕೆಯಾಗದ ಹಾಗೆ ನಾಗಾಭರಣ ಸಿನಿಮಾ ಮಾಡ್ತಾರಾ ಅನ್ನೋದು ಸದ್ಯದ ಪ್ರಶ್ನೆ.

ಸಾಲು ಸಾಲು ಚಿತ್ರಗಳಲ್ಲಿ ಯುವ ಸಾಮ್ರಾಟ್ ಬ್ಯುಸಿ..!
ಸಿಂಗ, ಜುಗಾರಿ ಕ್ರಾಸ್ ನಂತ್ರ ಚಿರು ಖಾಕಿ ಖದರ್..!

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಇದ್ದಕ್ಕಿದಂತೆ ಸಿನಿಮಾ ಮಾಡೋ ಸ್ಪೀಡ್ ಹೆಚ್ಚಿಸಿದ್ದಾರೆ.. ಅಮ್ಮ ಐ ಲವ್ ಯು ನಂತ್ರ ಚಿರು ನಟನೆಯ ರಾಜ ಮಾರ್ತಾಂಡ ಸಿನಿಮಾ ರಿಲೀಸ್ಗೆ ರೆಡಿಯಾಗ್ತಿದೆ.. ಇದ್ರ ಮಧ್ಯೆ ಉದಯ್ ಮೆಹ್ತಾ ನಿರ್ಮಾಣದಲ್ಲಿ ವಿಜಯ್ ಕಿರಣ್ ನಿರ್ದೇಶನದ ಸಿಂಗ ಸಿನಿಮಾದಲ್ಲಿ ನಟಿಸ್ತಿದ್ದಾರೆ.. ಈ ಲಿಸ್ಟ್ಗೆ ಈಗ ಜುಗಾರಿ ಕ್ರಾಸ್ ಸೇರ್ಕೊಂಡಿದೆ.

ಸಿಂಗ, ಜುಗಾರಿ ಕ್ರಾಸ್ ಜೊತೆ ಜೊತೆಗೆ ಖಾಕಿ ಅನ್ನೋ ಮತ್ತೊಂದು ಸಿನಿಮಾಗೆ ಚಿರು ಕಮಿಟ್ ಆಗಿದ್ದಾರೆ.. ತರುಣ್ ಟಾಕೀಸ್ ಬ್ಯಾನರ್ನಲ್ಲಿ ಅಕಿರಾ ಖ್ಯಾತಿಯ ನವೀನ್ ರೆಡ್ಡಿ ಖಾಕಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.. ಟೈಟಲ್ಲೇ ಹೇಳುವಂತೆ ಇದು ಪೊಲೀಸ್ ಆಫೀಸರ್ ಕಥೆ ಅನ್ನಲಾಗ್ತಿದ್ದು, ಚಿರಂಜೀವಿ ಸರ್ಜಾ ಖಾಕಿ ತೊಟ್ಟು ಖದರ್ ತೋರ್ಸೋಕೆ ರೆಡಿಯಾಗ್ತಿದ್ದಾರೆ.. ಒಟ್ಟಾರೆ ಯುವ ಸಾಮ್ರಾಟ್ ಚಿರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿದ್ದು, ಅಭಿಮಾನಿಗಳನ್ನ ರಂಜಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.

Recommended For You

Leave a Reply

Your email address will not be published. Required fields are marked *