SIT ತನಿಖೆಗೆ ಬಿಜೆಪಿ ನಾಯಕರ ತೀವ್ರ ವಿರೋಧ

ಬೆಂಗಳೂರು: ಧ್ವನಿ ಸುರುಳಿ ವಿಚಾರದ ಬಗ್ಗೆ ಎಸ್ ಐಟಿ ತನಿಖೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸದನದ ಕಲಾಪದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಬಿಜೆಪಿ ಸದಸ್ಯರು ನ್ಯಾಯಾಂಗ ತನಿಖೆ ಮಾಡಿಸಿ, ಇಲ್ಲವೇ ಸದನ ಸಮಿತಿ ಮಾಡಿ. ನಮಗೆ ನ್ಯಾಯಾಂಗ ಸಮಿತಿ ತನಿಖೆ ಮೇಲೆ ನಂಬಿಕೆಯಿದೆ. ಎಸ್ ಐಟಿ ಮೇಲೆ ಯಾವುದೇ ನಂಬಿಕೆಯಿಲ್ಲ ಎಂದು ಸದನದಲ್ಲಿ ಬಿಜೆಪಿ ನಾಯಕರು ಎಸ್ ಐಟಿ ಬಗ್ಗೆ ತೀವ್ರ ವಿರೋಧಪಡಿಸಿದ್ದಾರೆ.

ಇನ್ನು, ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ನನ್ನನ್ನ ಆಟಿಕೆ ವಸ್ತುವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ, ಯಾರಿಂದಲೂ ಸಾಧ್ಯವಿಲ್ಲ ಎಂದ ಅವರು ನ್ಯಾಯಾಂಗ ತನಿಖೆ ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಸರ್ಕಾರದ ಮೇಲೆ ವಿಶ್ವಾಸವಿಲ್ಲದಿರೋದಕ್ಕೆ ಆ ಕಡೆ ಕೂತಿದ್ದೀರಿ, ವಿಶ್ವಾಸವಿದ್ದಿದ್ದರೆ ಈ ಕಡೆ ಕೂರುತ್ತಿದ್ದಿರಿ ಎಂದು ಸ್ಪೀಕರ್ ರಮೇಶ್ ಕುಮಾರ್ ಬಿಜೆಪಿ ಸದಸ್ಯರ ಆಕ್ಷೇಪಕ್ಕೆ ಹಾಸ್ಯ ರೂಪದಲ್ಲಿ ತಿಳಿಸಿದ್ದಾರೆ.

Recommended For You

Leave a Reply

Your email address will not be published. Required fields are marked *