ಕೆಜಿಎಫ್ ಚಾಪ್ಟರ್ 2ನಲ್ಲಿ ದೊಡ್ಮನೆ ಹುಡ್ಗ ಪುನೀತ್ ರಾಜ್‌ಕುಮಾರ್..?!

ಕೆಜಿಎಫ್.. ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಒನ್ ಆಫ್ ದ ಮಾಸ್ಟರ್ ಪೀಸ್. ರಾಕಿಂಗ್ ಸ್ಟಾರ್ ಯಶ್​ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ, ಜನಪ್ರಿಯತೆ ಕೊಟ್ಟು, ನ್ಯಾಷನಲ್ ಸ್ಟಾರ್ ಮಾಡಿದಂತಹ ಮ್ಯಾಗ್ನಮ್ ಓಪಸ್. ಬರೋಬ್ಬರಿ 300ಕೋಟಿ ಬ್ಯುಸಿನೆಸ್ ಮಾಡಿ ಬಾಲಿವುಡ್ ಮಂದಿಯ ಕಣ್ಣು ಕೆಂಪಾಗಿಸಿದಂತಹ ಮೆಗಾ ಪ್ರಾಜೆಕ್ಟ್.

ಕೆಜಿಎಫ್ 50 ದಿನ ಕಂಪ್ಲೀಟ್.. ಶತದಿನೋತ್ಸವದತ್ತ ಹೆಜ್ಜೆ
ಇದೇ ತಿಂಗಳಾಂತ್ಯಕ್ಕೆ ಸೀಕ್ವೆಲ್ ಶೂಟಂಗ್​ಗೆ ಟೀಂ ಸಜ್ಜು
ಸದ್ಯ ಯಶಸ್ವಿ 50 ದಿನ ಪೂರೈಸಿರೋ ಕೆಜಿಎಫ್ ಸಿನಿಮಾ, ಶತದಿನೋತ್ಸವದತ್ತ ಮುನ್ನುಗ್ಗುತ್ತಿದೆ. ರಿಲೀಸ್ ಆದ ದಿನ ಇದ್ದಂತಹ ಅದೇ ಕ್ರೇಜ್ ಇಂದಿಗೂ ಉಳಿಸಿಕೊಂಡಿದೆ. ನಿರ್ಮಾಪಕರು ದಿಲ್ ಖುಷ್ ಆಗಿದ್ದಾಯ್ತು. ಅದ್ರಂತೆ ಇದೀಗ ಕೆಜಿಎಫ್ ಸೀಕ್ವೆಲ್ ಶೂಟಿಂಗ್​ಗೆ ಟೀಂ ಕೆಜಿಎಫ್ ಸಕಲ ಸಿದ್ಧತೆ ನಡೆಸ್ತಿದೆ. ಸದ್ಯ ವರ್ಕ್​ ಶಾಪ್ಸ್ ಮಾಡ್ತಿರೋ ಟೀಂ, ಇದೇ ತಿಂಗಳಾಂತ್ಯಕ್ಕೆ ಸೆಟ್​ಗೆ ಇಳಿದು ನಾನ್​ಸ್ಟಾಪ್ ಶೂಟಿಂಗ್​ಗೆ ಸಜ್ಜಾಗ್ತಿದೆ.

ರಾಕಿ ಭಾಯ್ ಯಶ್ ಕೂಡ ಮೈ ನೇಮ್ ಈಸ್ ಕಿರಾತಕ ಸಿನಿಮಾನ ಪೋಸ್ಟ್​ಪೋನ್ ಮಾಡಿಕೊಂಡು, ಮತ್ತೆ ಗೆಟಪ್​ಗಾಗಿ ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಎಲ್ಲರೂ ಎದುರು ನೋಡ್ತಿರೋ ಕೆಜಿಎಫ್ ಸೀಕ್ವೆಲ್, ಸಿನಿಪ್ರಿಯರ ನಿರೀಕ್ಷೆಯಂತೆ ಸದ್ಯ ಬಂದಿರೋ ಚಾಪ್ಟರ್​- 1ಗೂ ಮೀರಿದಂತಹ ಸ್ಟ್ಯಾಂಡರ್ಡ್​ನಲ್ಲಿ ಮಾಡಲು ಪಣ ತೊಟ್ಟಿದೆ.

ಯಶಸ್ವಿ 25ನೇ ದಿನದತ್ತ ಪುನೀತ್ ‘ನಟಸಾರ್ವಭೌಮ’
ನಟಸಾರ್ವಭೌಮ ಅಪ್ಪು ಮೀಟ್ಸ್ ರಾಕಿ ಭಾಯ್ ಯಶ್
ಫ್ಯಾನ್ಸ್​ಗೆ ಯಶ್- ಪುನೀತ್ ಕೊಟ್ರು ದಿಲ್ ಖುಷ್ ನ್ಯೂಸ್
ಒಂದೇ ಸಿನಿಮಾದಲ್ಲಿ ಪವರ್ ಸ್ಟಾರ್- ರಾಕಿಂಗ್ ಸ್ಟಾರ್..!!
ಕಳೆದ ವಾರ ತೆರೆಕಂಡ ನಟಸಾರ್ವಭೌಮ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸ್ತಿದೆ. ಮೊದಲ ದಿನವೇ 15ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಪವರ್ ಸ್ಟಾರ್ ಪವರ್​ಫುಲ್ ಮೂವಿ, ವಾರಾಂತ್ಯಕ್ಕೆ 25ಕೋಟಿ ಪೈಸಾ ವಸೂಲ್ ಮಾಡಿದೆ ಎನ್ನಲಾಗ್ತಿದೆ. ಸದ್ಯ ಕೆಜಿಎಫ್​ನ ಯಶ್ ಹಾಗೂ ನಟಸಾರ್ವಭೌಮದ ಪುನೀತ್ ಇಬ್ಬರೂ ಚಿತ್ರರಂಗದ ಹಾಟ್ ಕೇಕ್ಸ್. ಹಾಗಾಗಿ ಇವರಿಬ್ಬರ ಭೇಟಿ ಇದೀಗ ಟಾಕ್ ಆಫ್ ದ ಟೌನ್ ಆಗಿದೆ.

ಇತ್ತೀಚೆಗೆ ಸಿನಿಮಾವೊಂದರ ಮುಹೂರ್ತ ಕಾರ್ಯಕ್ರಮದಲ್ಲಿ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡ ಪವರ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ಒಟ್ಟಿಗೆ ನಟಿಸೋ ಸೂಚನೆ ಕೊಟ್ಟರು. ಇದು ಇಬ್ಬರೂ ಸ್ಟಾರ್​ಗಳ ಫ್ಯಾನ್ಸ್​ಗೆ ಎಲ್ಲಿಲ್ಲದ ಖುಷಿ, ಸಂಭ್ರಮವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ, ಯಶ್ ಮೊದಲಿನಿಂದಲೂ ದೊಡ್ಮನೆ ಹುಡ್ಗ ಪುನೀತ್ ಡ್ಯಾನ್ಸ್ ಮತ್ತು ಅಭಿನಯ ನೋಡ್ತಾ ಬೆಳೆದವರು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಉತ್ತಮ ಸ್ನೇಹ- ಬಾಂಧವ್ಯ ಕೂಡ ಇದೆ. ಪರಸ್ಪರ ಕುಶಲೋಪಹರಿ ಹಂಚಿಕೊಳ್ಳೋದ್ರ ಜೊತೆ ಸಿನಿಮಾಗಳ ವಿಚಾರವಾಗಿ, ಚಿತ್ರರಂಗದ ಕುರಿತಾಗಿ ಯೋಚಿಸೋ ಮನಸುಗಳಿವು.

KGF ಸೀಕ್ವೆಲ್​ನಲ್ಲಿ ರಾಕಿ ಭಾಯ್ ಜೊತೆ ದೊಡ್ಮನೆ ಹುಡ್ಗ..?
ಬಿಟೌನ್ ಸಂಜಯ್ ದತ್ ಸ್ಥಾನ ತುಂಬ್ತಾರಾ ಪವರ್ ಸ್ಟಾರ್..?
ಈ ಹಿಂದೆ ಕೆಜಿಎಫ್ ಚಾಪ್ಟರ್-2ನಲ್ಲಿ ಬಾಲಿವುಡ್​ನ ಸೂಪರ್ ಸ್ಟಾರ್ ಸಂಜಯ್ ದತ್ ನಟಿಸೋ ಸಾಧ್ಯತೆ ಇದೆ ಎನ್ನಲಾಗಿತ್ತು. ಆದ್ರೆ ಸಂಜಯ್ ದತ್ ಬರೋದು ಡೌಟು ಅಂದಾಗ, ಹಾಗಾದ್ರೆ ಆ ಪಾತ್ರವನ್ನ ಯಾರು ಮಾಡ್ತಾರೆ ಅನ್ನೋ ಕುತೂಹಲ ಸಹಜವಾಗಿಯೇ ಸಿನಿದುನಿಯಾದಲ್ಲಿ ಗರಿಗೆದರಿದೆ. ಹೀಗಿರುವಾಗ ಪುನೀತ್ ಮತ್ತು ಯಶ್ ಒಟ್ಟಿಗೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು, ಒಟ್ಟಿಗೆ ನಟಿಸಿದ್ರೂ ಅಚ್ಚರಿಯಿಲ್ಲ ಅಂತ ಸಖತ್ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.

ಅಭಿಮಾನಿಗಳ ಆಶಯದಂತೆ ಯಶ್- ಪುನೀತ್ ಸಿನಿಮಾ ಭವಿಷ್ಯದಲ್ಲಿ ಯಾವಾಗೋ ಆಗೋ ಬದಲು ಕೆಜಿಎಫ್ ಸೀಕ್ವೆಲ್​ ಮೂಲಕವೇ ಆದ್ರೆ ಅದಕ್ಕಿಂತ ಸಿಹಿಸುದ್ದಿ ಮತ್ತೊಂದಿಲ್ಲ. ಇನ್ನು ಯುವರತ್ನ ಮತ್ತು ಜೇಮ್ಸ್ ಸಿನಿಮಾಗಳ ಶೂಟಿಂಗ್​ಗೆ ಸಜ್ಜಾಗ್ತಿರೋ ಪುನೀತ್, ಅವುಗಳಿಗೂ ಮುನ್ನ ಕೆಜಿಎಫ್​ಗೆ ಗ್ರೀನ್ ಸಿಗ್ನಲ್ ಕೊಟ್ಟು ಹೊಸ ಇತಿಹಾಸ ಬರೆದರೆ ಅದಕ್ಕಿಂತ ಉತ್ತಮ ಬೆಳವಣಿಗೆ ಮತ್ತೊಂದಿರಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Recommended For You

Leave a Reply

Your email address will not be published. Required fields are marked *