ಆಗ ಬಿಜೆಪಿಯವರಿಗೇನು ಸ್ಟ್ರೋಕ್ ಹೊಡೆದಿತ್ತಾ..?- ಜಮೀರ್ ಅಹಮದ್

ಬೆಂಗಳೂರು: ವಿಧಾನಸೌಧದಲ್ಲಿಂದು ಮಾತನಾಡಿದ ಸಚಿವ ಜಮೀರ್ ಅಹಮದ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸ್ಪೀಕರ್ ವಿರುದ್ಧವೇ ಆರೋಪ ಕೇಳಿ ಬಂದಿರುವುದರಿಂದ ಅವರು ತನಿಖೆಗೆ ವಹಿಸುವುದಕ್ಕೆ ಬರುವುದಿಲ್ಲ. ಅದಕ್ಕಾಗಿ ಎಸ್ ಐಟಿ ರಚನೆ ಮಾಡಿ‌ ತನಿಖೆಗೆ ಆದೇಶಿಸುವಂತೆ ಸ್ಪೀಕರ್ ಸೂಚಿಸಿದ್ದಾರೆ. 2014ರಲ್ಲಿ ನಡೆದ ಕುಮಾರಸ್ವಾಮಿ ಆಡಿಯೋ ವಿಡಿಯೋ ವಿಚಾರವನ್ನು ಬಿಜೆಪಿಯವರು ಈಗ ಪ್ರಸ್ತಾಪ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಬಿಜೆಪಿ ಕಾರ್ಯಕರ್ತರೇ ಬಂದು ಕೇಳಿಕೊಂಡಾಗ ತಮಾಷೆಗೆ ಕುಮಾರಸ್ವಾಮಿ ಮಾತನಾಡಿರೋದು, ಆಗ ವಿರೋಧ ಪಕ್ಷದಲ್ಲಿ ಬಹಳ ಬಿಜೆಪಿಯವರೇ ಇದ್ರಲ್ಲ ಆಗ ತನಿಖೆಗೆ ಆಗ್ರಹಿಸಬೇಕಿತ್ತು..? ಆಗ ಏನಾಗಿತ್ತು ಬಿಜೆಪಿಯವರಿಗೆ ಸ್ಟ್ರೋಕ್ ಹೊಡೆದಿತ್ತಾ..?ಎಂದು ಜಮೀರ್ ಬಿಜೆಪಿ ವಿರುದ್ಧ ಆಕ್ರೋಶ ಭರಿತ ಪ್ರಶ್ನೆ ಕೇಳಿದ್ದಾರೆ.

ಇನ್ನು ಯಡಿಯೂರಪ್ಪ ಆಡಿಯೋ ಬಗ್ಗೆ ಮಾತನಾಡಿದ ಜಮೀರ್ ಅಹಮದ್, ಯಡಿಯೂರಪ್ಪ ಮೊದ ಮೊದಲು ನಂದಲ್ಲ ಆಡಿಯೋ ಫೇಕ್ ಅಂದ್ರು. ಈಗ ಅವರೇ ಒಪ್ಪಿಕೊಂಡಿದ್ದಾರೆ. ರಾಜಕೀಯ ನಿವೃತ್ತಿ ಪಡೆಯುತ್ತೀನಿ ಅಂದ್ರಲ್ಲ ಯಡಿಯೂರಪ್ಪನವರೇ ಈಗ ಏನ್ಮಾಡ್ತಿರಾ ಹೇಳಿ ಎಂದು ಕೇಳಿದ್ದಾರೆ.