ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಹೆಚ್.ಡಿ.ದೇವೇಗೌಡರು..!?

ದೆಹಲಿ: ದೆಹಲಿಯಲ್ಲಿ ಇಂದು ಭಾಷಣ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಇನ್ಮೇಲೆ ಸಂಸದೀಯ ಚುನಾಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿದ್ದಾರೆ.

ಅಲ್ಲದೇ ಈ ಬಗ್ಗೆ ಮಾತು ಮುಂದುವರಿಸಿದ ದೇವೇಗೌಡರು, ನಾನು ಸ್ಪರ್ಧೆ ಮಾಡುವುದಿಲ್ಲ ಆದರೆ ಯುವಕರನ್ನು ತಯಾರು ಮಾಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ಸಂಸದರಿಗೆ ನೇರ ಸವಾಲು ಹಾಕಿದ ದೇವೇಗೌಡರು, ನಾನೂ ಬಹಿರಂಗವಾಗಿ ಹೇಳುತ್ತೇನೆ. ಕರ್ನಾಟಕದಲ್ಲಿ ಇರುವ ಮೈತ್ರಿ ಸರ್ಕಾರ ಬೀಳಿಸಿ ನೋಡೋಣ. ಬಳ್ಳಾರಿ ಮೈನಿಂಗ್ ದಂಧೆಯನ್ನ ನನ್ನ ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ತಕ್ಷಣ ನಿಲ್ಲಿಸಿದರು. ಬಿಜೆಪಿ ಜೊತೆ ಹೋಗಿ ಮಾಡಿದ ತಪ್ಪನ್ನು ಮತ್ತೆ ಮಾಡೋದಿಲ್ಲ ಎಂದು ಹೇಳಿದ್ದಾರೆ.