ರಮೇಶ್ ಕುಮಾರ್ ಕಣ್ಣೀರಿಗೆ ಡಿ.ಕೆ ಶಿವಕುಮಾರ್ ಮನಮಿಡಿಯಿತು..!

X
TV5 Kannada11 Feb 2019 8:04 AM GMT
ಬೆಂಗಳೂರು: ತಾವು ಯಾವುದೇ ಕಾರಣಕ್ಕೂ ಎಮೋಶನಲ್ ಆಗಬಾರದು ಮೆರಿಟ್ಸ್, ಡಿಮೆರಿಟ್ಸ್ ಬಗ್ಗೆ ನಾವು ಪ್ರಸ್ತಾಪ ಮಾಡುತ್ತಿಲ್ಲ ಎಂದು ಸ್ಪೀಕರ್ ರಮೆಶ್ ಕಣ್ಣೀರಿಗೆ ಡಿ.ಕೆ ಶಿವಕುಮಾರ್ ಸಮಾಧಾನಕರ ಮಾತುಗಳನ್ನು ತಿಳಿಸಿದ್ದಾರೆ.
ಸದನದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮರ್ಯಾದೆ ಹಾಳಾಗುತ್ತಿದೆ. ನಮ್ಮ ಗೌರವವನ್ನ ಉಳಿಸಬೇಕಾದವರು ನೀವು ನಿಮ್ಮ ಆರೋಪಕ್ಕೆ ಮಾತ್ರ ನೀವು ಗಮನಹರಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಗೆ ತಿಳಿಸಿದರು.
ಇನ್ನು, ನಿಮ್ಮ ಬಾಯಿಂದ ಬರುವ ಆದೇಶ ಇತಿಹಾಸವಾಗಬೇಕು. ಎಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಡಿ ಕೆ ಶಿವಕುಮಾರ್ ಅಭಿಪ್ರಾಯ ತಿಳಿಸಿದ್ದಾರೆ.
Next Story