ಮತ್ತೋಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ದರ್ಶನ್

ಮೈಸೂರಿನಲ್ಲಿ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದ್ದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೋಪಾಲರ ಸಂಘದ ವತಿಯಿಂದ ಮತ್ತು ಪಶುಪಾಲನ ಇಲಾಖೆ ಸಹಯೋಗದೊಂದಿಗೆ,  ದಿ. ತೂಗುದೀಪ ಶ್ರೀನಿವಾಸ್ ಹಾಗೂ ದಿ. ಅಂಬರೀಶ್ ಸ್ಮರಣಾರ್ಥವಾಗಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಮೈಸೂರಿನ ಜೆ.ಕೆ. ಮೈದಾನದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಿತು.

5 ಬಹುಮಾನಗಳು ಕೂಡ ಬೆಂಗಳೂರಿನ ಪಾಲು ಹಾಗಿದ್ದು,  ಮೊದಲನೆ ಬಹುಮಾನ ವಿತರಣೆಯನ್ನು ನಟ ದರ್ಶನ್ ಮಾಡಿದರು. 1ನೇ ಬಹುಮಾನ 41.800ಗ್ರಾಂ ರಿಜಿತಾ ಎಸ್.ಬೆಂಗಳೂರು, 2ನೇ ಬಹುಮಾನ ಚಂದನ್, ಮುನಿರಾಜು ಭಕ್ತನಪಾಳ್ಯ, ನೆಲಮಂಗಲ 40.900 ಗ್ರಾಂ, 3ನೇ ಬಹುಮಾನ ರಾಜಾಜಿನಗರ 40.700 ಗ್ರಾಂ. ಇನ್ನೂ ಕಾರ್ಯಕ್ರಮದಲ್ಲಿ  ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.