ಕುಮಾರಸ್ವಾಮಿ ವಿರುದ್ಧ ’40 ಕೋಟಿ’ ‘ಸಿಡಿ’ ಬಿಡುಗಡೆ ಮಾಡಿದ ಬಿಜೆಪಿ..!

ಬೆಂಗಳೂರು: ಸದನದಲ್ಲಿಂದು ಬಿಜೆಪಿಯವರು ಕುಮಾರಸ್ವಾಮಿ ವಿರುದ್ಧ ಸಿಡಿಯೊಂದು ಬಿಡುಗಡೆ ಮಾಡಿದ್ದು, ಸಿಎಂ ಕುಮಾರಸ್ವಾಮಿ 40 ಕೋಟಿ ರೂಪಾಯಿ ಕೇಳಿದ್ದರೆಂದು ಆರೋಪಿಸಿದೆ.

ಸದನದಲ್ಲಿ ಸಿಡಿ ಬಿಡುಗಡೆ ಮಾಡಿದ ರೇಣುಕಾಚಾರ್ಯ, ಕುಮಾರಸ್ವಾಮಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಿಡಿಯನ್ನು ಸ್ಪೀಕರ್ ರಮೇಶ್ ಕುಮಾರ್‌ಗೆ ಹಸ್ತಾಂತರಿಸಿದ್ದು, ಪರಿಶೀಲನೆ ನಡೆಸಲಾಗಿದೆ.

ಇದಲ್ಲದೇ, ರೇವಣ್ಣ ಯಡಿಯೂರಪ್ಪ ಮನೆಗೆ ಯಾಕೆ ಬಂದಿದ್ರು..? ಕಾಂಗ್ರೆಸ್‌ನವರು ತೊಂದರೆ ನೀಡುತ್ತಿದ್ದರು, ಹೀಗಾಗಿ ನಮ್ಮ ಜೊತೆ ಕೈಜೋಡಿಸಿ ಅಂತ ಯಾಕೆ ಬಂದಿದ್ರು..? ಇದರ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.