ಅವನಿಂದ ನನಗೆ ತುಂಬಾ ಹಿಂಸೆ ಆಗಿದೆ: ಕವಿತಾ ಗೌಡ

ಮುಂಚೆಯಿಂದ ಕೂಡ ಆಂಡ್ರಿವ್ ನನಗೆ ತೊಂದ್ರೆ ಕೊಟ್ಟಿದ್ದಾನೆ. ಶೋ ನಂತರ ಕೂಡ ಮಜಾ ಟಾಕೀಸ್ ನಲ್ಲಿ ಇದ್ದಾಗ ಮಾತನಾಡಿದ್ದು ಬೇಸರತರಿಸಿದೆ ಎಂದು ಕಿರುತರೆ ನಟಿ ಬಿಗ್ ಬಾಸ್ ಪ್ರತಿ ಸ್ಪರ್ಧಿ ಕವಿತಾ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಸೂಪರ್ ಹೀರೊ ಸೂಪರ್ ವುಮೆನ್ ಶೋ ನಲ್ಲಿ ನಂಗೆ ದೌರ್ಜನ್ಯ ಎಸಗಲಾಗಿದೆ. ಸಂಪೂರ್ಣ ರೆಕಾರ್ಡ್ ಆಗಿರುವ ವಿಡಿಯೋ ನೋಡಿದರೆ ಆತನ ತಪ್ಪು ಬಹಿರಂಗವಾಗಿ ತಿಳಿಯುತ್ತಾದೆ. ಹುಡಗಿ ಹಾಗೂ ಹುಡಗ ಮಧ್ಯ ಸಮಾನವಾದ ಗೌರವ ಕೊಡಬೇಕು. ಅವನಿಂದ ನನಗೆ ತುಂಬಾ ಹಿಂಸೆ ಆಗಿದೆ. ಬೇರೆ ಹುಡಗಿಯರಿಗೂ ತೊಂದರೆ ಆಗಿದೆ, ಆದರೆ ಅವರು ದೂರು ನೀಡುವ ನಿರ್ಧಾರ ತೆಗೆದುಕೊಂಡಿಲ್ಲಾ ಎಂದು ಹೇಳಿದರು.

ಶೋ ಮುಗಿದ ಮೇಲೆ ಕೂಡ ಅವರು ಸಿಕ್ಕ ಸಿಕ್ಕಲ್ಲಿ ಅವಾಚ್ಯ ಶಬ್ದ ನನ್ನ ಮೇಲೆ ಬಳಸಿದ್ದಾರೆ. ಮೈಕ್ ಹಿಡಿದುಕೊಂಡು ಆತ ಎಲ್ಲರಿಗೂ ಬೈದಿದ್ದಾನೆ. ನಾನು ಈಗ ದೂರು ನೀಡಿ ನ್ಯಾಯ ಕೇಳುತ್ತಿದ್ದೇನೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ್ ಮೇಲೆ ಸ್ವಲ್ಪ ಸಮಯ ತೆಗೂಡುಕೊಂಡು ದೂರು ನೀಡುತ್ತಿದ್ದೇನೆ ಎಂದು ಕವಿತಾ ಗೌಡ ಸ್ಪಷ್ಟಪಡಿಸಿದರು.

ದೂರು ಕುರಿತು ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷಿ ಬಾಯಿ ಹೇಳಿಕೆ ನೀಡಿದ್ದು, ಸದ್ಯ ಕವಿತಾ ಗೌಡ ಅವರಿಂದ ದೂರು ತೆಗೆದುಕೊಂಡಿದ್ದೇವೆ. ಶೋ ನಲ್ಲಿ ಆಂಡ್ರಿವ್ ನನ್ನ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ತೊಂದ್ರೆ ಕೊಟ್ಟಿದ್ದಾನೆ. ಆಚೆ ಬಂದ ಮೇಲು ಸಹ ಟಿವಿ ಶೋ ಗಳಲ್ಲಿ ಕೆಟ್ಟದಾಗಿ ಮಾತನಾಡಿದ್ದಾನೆ. ಅವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಕೊಟ್ಟಿದ್ದಾರೆ ಎಂದರು.

ಆಯೋಜಕ ಗುರುರಾಜ್ ಶೆಣೈ .ಹಾಗೂ ಆಂಡ್ರಿವ್ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ವಿಚಾರಣೆಗೆ ಕರೆತರುತ್ತೇವೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದು ಆದರೆ ಅದು ಲೈಂಗಿಕ ಕಿರುಕಳ ಎಂದು ಪರಿಗನಿಸಲ್ಪಡುತ್ತದೆ. ಶೋ ನಡೆಯುವ ಸಮಯದಲ್ಲಿ ಅವರು ಸಾಕಷ್ಟು ಭಾರಿ ದೂರು ನೀಡಿದ್ದರು ಕ್ರಮ ಕೈಗೊಂಡಿಲ್ಲಾ ಎಂದು ಹೇಳಿಕೆ ನಮ್ಮ ಮುಂದೆ ನೀಡಿದ್ದಾರೆ ಎಂದರು.