ಒಂದೇ ಸಿನಿಮಾದಲ್ಲಿ ಯಶ್- ಪುನೀತ್ ರಾಜ್‌ಕುಮಾರ್ ಆ್ಯಕ್ಟಿಂಗ್..!?

ಸ್ಯಾಂಡಲ್​​​​ವುಡ್​​ನಲ್ಲಿ ಈ ನಡುವೆ ಮಲ್ಟಿ ಸ್ಟಾರರ್ ಸಿನಿಮಾಗಳ ಬಗ್ಗೆ ಹೆಚ್ಚೆಚ್ಚು ಮಾತುಗಳು ಕೇಳಿ ಬರ್ತಿವೆ. ಇಬ್ಬರು ಸ್ಟಾರ್ ನಟರನ್ನು ಒಂದೇ ತೆರೆ ಮೇಲೆ ನೋಡೋದೆ ಅಭಿಮಾನಿಗಳೀಗೆ ಸಿನಿಮಾ ಪ್ರೇಕ್ಷಕರಿಗೆ ಹಬ್ಬ. ಈ ಹಿಂದೆ ದಿ ವಿಲನ್​ ಸಿನಿಮಾದಲ್ಲಿ ಶಿವಣ್ಣ, ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಿ ಅಭಿಮಾನಿಗಳಿಗೆ ರಸದೂಟ ನೀಡಿದ್ರು. ಈಗ ಅದೇ ರೀತಿ ಚಿತ್ರರಂಗದ ಇನ್ನಿಬ್ಬರು ಸ್ಟಾರ್ ದಿಗ್ಗಜರು ಒಂದಾಗೋ ಲಕ್ಷಣ ಕೇಳಿ ಬರ್ತಿವೆ.

ಎಸ್…ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಬಾಕ್ಸ್​ ಆಫೀಸ್​ ಸುಲ್ತಾನರು. ಇಬ್ಬರಿಗೂ ಅಪಾರ ಅಭಿಮಾನಿ ಬಳಗ ಇದೆ. ಜೊತೆಗೆ ಈ ಇಬ್ಬರು ಒಳ್ಳೆಯ ಸ್ನೇಹಿತರು ಕೂಡ. ಇದೀಗ ಈ ಸ್ನೇಹಕ್ಕೆ ಕಾಣಿಕೆಯಾಗಿ ಇಬ್ಬರೂ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳೋ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಈ ಆತ್ಮೀಯ ಸ್ನೇಹಿತರು ಇಂದು ಟಿ ಎಸ್ ನಾಗಾಭರಣ ನಿರ್ದೇಶನದ, ಚಿರಂಜೀವಿ ಸರ್ಜಾ ಹೊಸ ಸಿನಿಮಾ ಮುಹೂರ್ತದಲ್ಲಿ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಯಶ್ ಹಾಗೂ ಪುನೀತ್. ಒಂದೊಳ್ಳೆ ಸಬ್ಜೆಕ್ಟ್ ಸಿಕ್ಕರೆ ಇಬ್ಬರು ಒಟ್ಟಿಗೆ ಅಭಿನಯಿಸೋದಾಗಿ ಹೇಳಿದ್ರು. ಸುದ್ದಿ ಕೇಳಿ ಯಶ್ ಹಾಗೂ ಪುನೀತ್ ಅಭಿಮಾನಿ ಬಳಗ ದಿಲ್ ಖುಷ್ ಆಗಿದೆ.

ಒಂದು ವೇಳೆ ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಗೆ ಇಷ್ಟವಾಗೋ ಸಬ್ಜೆಕ್ಟ್ ಸಿಕ್ಕರೆ ಖಂಡಿತಾ ದೊಡ್ಮನೆ ಹಾಗೂ ರಾಕಿಂಗ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ.
ಭಾರತಿ ಜಾವಳ್ಳಿ ಎಂಟಟೈನ್ಮೆಂಟ್ ಬ್ಯುರೋ ಟವಿ5