ಪ್ರಧಾನಿ ಮೋದಿಗೆ ‘ಟಾರ್ಚ್’ ವೆಲ್‌ಕಮ್ ನೀಡಿದ ಹುಬ್ಬಳ್ಳಿ ಮಂದಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದು, ಉತ್ತರ ಕರ್ನಾಟಕ ಜನ ನಮೋಗೆ ಮೊಬೈಲ್ ಟಾರ್ಚ್ ಆನ್ ಮಾಡಿ, ಬೆಳಕಿನ ಸ್ವಾಗತ ನೀಡಿದರು.

ಇನ್ನು ಪ್ರಧಾನಿ ಮೋದಿ ಕರ್ನಾಟಕದ ಬಿಜೆಪಿ ನಾಯಕರ ಜೊತೆಗೂಡಿ, ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿದರು. ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀಮತಿ ಸುಧಾಮೂರ್ತಿ, ಸಚಿವ ಆರ್.ವಿ.ದೇಶಪಾಂಡೆ, ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಪ್ರಹ್ಲಾದ ಜೋಶಿ, ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು.

ಸರ್ಕಾರಿ ಯೋಜನೆಗಳು:
1.. 1160 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡದ ಐಐಟಿ ಕಟ್ಟಡ ಹಾಗೂ ಐಐಐಟಿ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ.

2.. ಹುಬ್ಬಳ್ಳಿಯ 500 ಮನೆಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಯೋಜನೆಗೆ ಚಾಲನೆ.

3.. ಮಂಗಳೂರಲ್ಲಿ  1,227 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 1.5 ಮಿಲಿಯನ್‌ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಭೂಗತ ತೈಲಾಗಾರ ಉದ್ಘಾಟನೆ.

4.. ಉಡುಪಿ ಜಿಲ್ಲೆಯಲ್ಲಿ 1,693 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 2.5 ಮಿಲಿಯನ್‌ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಭೂಗತ ತೈಲಾಗಾರ ಲೋಕಾರ್ಪಣೆ.

5.. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಾಣವಾಗಿರುವ 2,350 ಮನೆಗಳ ಹಸ್ತಾಂತರ.

6.. 222 ಕೋಟಿ ವೆಚ್ಚದ ಚಿಕ್ಕಜಾಜೂರು-ಮಾಯಕೊಂಡ ಜೋಡಿ ರೈಲು ಮಾರ್ಗ ಲೋಕಾರ್ಪಣೆ.

7.. ಹೊಸಪೇಟೆ-ಹುಬ್ಬಳ್ಳಿ-ವಾಸ್ಕೋ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಗೆ ಚಾಲನೆ.