ವಿವಾಹ ವಾರ್ಷಿಕೋತ್ಸವಕ್ಕೆ ಮಹೇಶ್‌ ಬಾಬು ತಮ್ಮ ಪತ್ನಿಗೆ ಏನೆಂದು ಸಂದೇಶ ಕಳುಹಿಸಿದ್ರು ಗೊತ್ತಾ..?

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ದಂಪತಿ ಇಂದು ತಮ್ಮ 14ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ವೇಳೆ ಇಂದು ಅವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿದ ಸಂದೇಶ ಎಲ್ಲರ ಮನಗೆದ್ದಿದೆ. ಈ ಪ್ರೇಮ ಸಂದೇಶಕ್ಕೆ 2 ಲಕ್ಷ ಲೈಕ್ಸ್ ಬಂದಿದ್ದು, ಭರಪೂರ ಕಮೆಂಟ್ಸ್ ಬಂದಿದೆ.

ಮಹೇಶ್ ಮತ್ತು ನಮ್ರತಾ ನಗುತ್ತಿರುವ ಸುಂದರವಾದ ಫೋಟೋವನ್ನ ಇನ್‌ಸ್ಟಾದಲ್ಲಿ ಅಪ್ಲೋಡ್ ಮಾಡಿದ ಮಹೇಶ್, ತಮ್ಮ ಅದ್ಭುತ ಕ್ಷಣ ಸೆರೆಯಾಗಿದೆ. ಇಂದು 14ನೇ ವಾರ್ಷಿಕೋತ್ಸವ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿಯ ನಮ್ರತಾ ಶಿರೋಡ್ಕರ್ ಎಂದು ಬರೆದಿದ್ದಾರೆ.

ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ನಮ್ರತಾ, 14 ವರ್ಷದ ಸುಂದರ ಪಯಣದಲ್ಲಿ ನನ್ನ ಜೊತೆ ಇದ್ದಿದ್ದಕ್ಕೆ ಧನ್ಯವಾದ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಮಹೇಶ್ ಬಾಬು ಎಂದಿದ್ದಾರೆ.

ಮಹೇಶ್ ಬಾಬು ಮತ್ತು ನಮ್ರತಾ, ಬಿ. ಗೋಪಾಲ್ ವಂಶಿ ನಿರ್ದೇಶನದ ಚಿತ್ರವೊಂದರಲ್ಲಿ ಭೇಟಿಯಾಗಿದ್ದು, ಗೆಳೆತನ ಪ್ರೀತಿಗೆ ತಿರುಗಿ ಇಬ್ಬರು ವಿವಾಹವದರು. ದಂಪತಿಗೆ ಗೌತಮ್ ಎಂಬ ಮಗ ಮತ್ತು ಸಿತಾರಾ ಎಂಬ ಮಗಳಿದ್ದಾಳೆ.

 

View this post on Instagram

 

Candid moments captured!! Anniversary 14!! Happy Anniversary my love ❤❤ @namratashirodkar ? @xavieraugustin Ur the best!!

A post shared by Mahesh Babu (@urstrulymahesh) on

Recommended For You

Leave a Reply

Your email address will not be published. Required fields are marked *