ಮಿಂಚಿಗಿಂತಲೂ ವೇಗ ಧೋನಿ ಸ್ಟಂಪ್: ಬ್ಯಾಟ್ಸ್ ಮೆನ್ ಶಾಕ್

ಹ್ಯಾಮಿಲ್ಟನ್​: ವಿಕೆಟ್​ ಹಿಂದೆ​ ಜಾದು​ ಮಾಡುವ ಮಹೇಂದ್ರ ಸಿಂಗ್ ಧೋನಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆಯುತ್ತಿರುವ ಅಂತಿಮ ಟಿ-20 ಪಂದ್ಯದಲ್ಲೂ ಮಿಂಚಿನ ವೇಗದಲ್ಲಿ ಸ್ಟಂಪ್​ ಎಗರಿಸಿ ಜಾದು ಮಾಡಿದ್ದಾರೆ.

ಸ್ಟಂಪ್ಸ್​ ಹಿಂದೆ ಮಹೇಂದ್ರ ಸಿಂಗ್​ ಧೋನಿ ಇರುವರೆಗೂ ನೀವು ಕ್ರೀಸ್​ ಬಿಟ್ಟು ಕದಲಬೇಡಿ ಅಂತ ಐಸಿಸಿ ಸಲಹೆ ನೀಡಿರುವ ವಿಷಯ ಬಹುಶಃ ಕಿವೀಸ್​ ಆಟಗಾರ ತಲೆಗೆ ಹಾಕೊಂಡಿಲ್ಲ ಅದರ ಪರಿಣಾಮವಾಗಿ ಇವತ್ತು ಸೀಫರ್ಟ್ ಕ್ರೀಸ್ ಬಿಟ್ಟು ಬೆಲೆತೆತ್ತಿದ್ದಾರೆ.

https://platform.twitter.com/widgets.js

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ತಂಡಕ್ಕೆ ಆರಂಭಿಕ ಆಟಗಾರ ಸೀಫರ್ಟ್​ ಆಸರೆಯಾದರು. 25 ಎಸೆತಗಳಲ್ಲಿ ಮೂರು ಬೌಂಡರಿ, ಮೂರು ಸಿಕ್ಸರ್​ ಸೇರಿ 43 ರನ್​ ಗಳಿಸಿ ಉತ್ತಮವಾಗಿ ಆಡುತ್ತಿದ್ದರು. 7.4ನೇ ಓವರ್​ ನಲ್ಲಿ ಕುಲ್​ದೀಪ್​ ಯಾದವ್​ ಎಸೆದ ಚೆಂಡನ್ನು ಮುಂದೆ ಬಂದು ಭಾರಿಸಲು ಹೋಗಿ ಧೋನಿ ಮಾಡಿದ ಮಿಂಚಿನ ವೇಗದ ಸ್ಟಂಪ್​ಗೆ ಬಲಿಯಾಗಿದ್ದಾರೆ.

ಧೋನಿ ಮಾಡಿದ ಕಾರ್ಯಕ್ಕೆ ಅವರ ಚುರುಕು ತನಕ್ಕೆ ಮನಸೊತ ಅಭಿಮಾನಿಗಳ ಟ್ವಿಟರ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿಸುತ್ತಿದ್ದಾರೆ.

Recommended For You

Leave a Reply

Your email address will not be published. Required fields are marked *