ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಈ ಲೇಡಿ ಡಾನ್​ ಏನು ಮಾಡಿದ್ಲು ಗೊತ್ತಾ..?

ಅವ್ಳು ಅಂದ್ರೆ ಸಿಲಿಕಾನ್​ ಸಿಟಿಯೇ ನಡಗುತ್ತೆ,. ಇವ್ಳ ಮಾತಿಗಿಳಿದು ಮೀಟರ್​ ಬಡ್ಡಿ ದಂಧೆಗೆ ಇಳಿದ್ರೋ ನಿಮ್ಮ ಕತೆ ಕಥಮ್​ ಅಂತಾನೇ ಲೆಕ್ಕ. ಅಂತ್ರದಲ್ಲಿ ಇವ್ಳ ವಿರುದ್ಧ ಯಾರಾದ್ರೂ ಕೇಸ್​ ಹಾಕ್ತೀನಿ ಅಂತಾ ಮುಂದೆ ಬಂದ್ರೆ ಬಿಡ್ತಾಳಾ…? ಲೇಡಿ ಡಾನ್​ ತನ್ನ ರೌಡಿಸಂ ಪರಾಕ್ರಮವನ್ನ ತೋರಿಸಿದ್ದಾಳೆ.

ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಲೇಡಿ ಡಾನ್​ ಕಿರಿಕ್​​..!

ಸಾಕ್ಷಿ ಹೇಳ್ತೀನಿ ಎಂದವಳ ಮೇಲೆ ಡೆಡ್ಲಿ ಅಟ್ಯಾಕ್​​..!

ಸಿಲಿಕಾನ್​ ಸಿಟಿ ಲೇಡಿ ಡಾನ್  ಯಶಸ್ವಿನಿ ಅಂದ್ರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಮೀಟರ್​ ಬಡ್ಡಿ ದಂಧೆ ಮೂಲಕ ಸಾಲ ಪಡೆದೋವ್ರಿಗೆ ನೀರು ಕುಡಿಸೋದ್ರಲ್ಲಿ ಈಕೆ ಮಹಾನ್​ ಪಂಟರ್​. ತೇಜಸ್ವಿನಿ ಮೀಟರ್​ ಬಡ್ಡಿ ದಂಧೆಯಿಂದ ರೋಸಿ ಹೋಗಿದ್ದ ಲಲಿತಾ 2 ವರ್ಷದ ಹಿಂದೆ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ವಿರುದ್ಧ ಕಂಪ್ಲೇಟ್​ ರಿಜಿಸ್ಟರ್​ ಮಾಡಿದ್ದಾಳೆ.

ಇದೇ ತಿಂಗಳ 11ರಂದು ಲಲಿತಾ ದಾಖಲಿಸಿದ್ದ ಕೇಸ್​ ಸಂಬಂಧ 4 ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು. ಕೇಸ್​ ವಾಪಾಸ್​ ತಗೋ ಅಂತಾ ಯಶಸ್ವಿನಿ ಅದೆಷ್ಟೋ ಬಾರಿ ಲಲಿತಾಗೆ ಧಮ್ಕಿ ಹಾಕಿದ್ದಾಳೆ. ಆದರೆ ಲಲಿತಾ ತನ್ನ ಮಾತು ಕೇಳ್ತಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಈ ರೀತಿ ಹಲ್ಲೆ ಮಾಡಿಸಿದ್ದಾಳೆ.

ಈ ಸಂಬಂಧ 6ಮಂದಿ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ, ಆದರೆ ತನ್ನ ಮೇಲೆ ಹಲ್ಲೆ ಸಂಬಂಧ ಮತ್ತೊಂದು ಕೇಸ್​ ದಾಖಲಾಗ್ತಿದ್ದಂತೆ ತನ್ನ ಗ್ಯಾಂಗ್​ ಸಮೇತ ಅಬೇಸ್​ ಆಗಿದ್ದಾಳೆ.

ಮೀಟರ್​ ದಂಧೆ ಹೆಸ್ರಲ್ಲಿ ಬಡವರ ಪ್ರಾಣ ತಿನ್ನೋ ಇಂತಾ ಕುಳಗಳಿಗೆ ಖಾಕಿ ಆದಷ್ಟು ಬೇಗ ಪಾಠ ಕಲಿಸಬೇಕಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.