ಭಾರತ ಬಿಂದಾಸ್, ಕಿವೀಸ್ ಖಲ್ಲಾಸ್..!

ಎಡನ್ ಪಾರ್ಕ್:  ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 1-1ರ ಸಮಬಲ ಸಾಧಿಸಿದೆ.  ಮೊದಲ ಮ್ಯಾಚ್‌ ಸೋತಿದ್ದ ರೋಹಿತ್ ಪಡೆ, 2ನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಹೀಗಾಗಿ ಭಾನುವಾರ ನಡೆಯಲಿರುವ ಫೈನಲ್‌ ಫೈಟ್ ಕುತೂಹಲ ಮೂಡಿಸಿದೆ.  ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ನ್ಯೂಜಿಲ್ಯಾಂಡ್  ತಂಡ, ಕೃನಾಲ್ ಪಾಂಡ್ಯ ಮತ್ತು ಖಲೀಲ್ ಅಹ್ಮದ್ ಬೌಲಿಂಗ್ ದಾಳಿಗೆ ತತ್ತರಿಸಿತು. ಪರಿಣಾಮ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು.

ಕಿವೀಸ್ ಪರ ಗ್ರಾಂಡ್‌ಹೋಮ್ ಆಕರ್ಷಕ ಅರ್ಧಶತಕ ಸಿಡಿಸಿದ್ರೆ, ಅನುಭವಿ ರಾಸ್ ಟೇಲರ್ 42 ರನ್‌ಗಳ ಕಾಣಿಕೆ ನೀಡಿದ್ರು.  ಕೃನಾಲ್ 3 ವಿಕೆಟ್ ಕಬಳಿಸಿದ್ರೆ, ಖಲೀಲ್‌ 2 ವಿಕೆಟ್ ಉರುಳಿಸಿದರು.  159 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು.  ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 79 ರನ್‌ಗಳ ಡೀಸೆಂಟ್ ಓಪನಿಂಗ್ ನೀಡಿದ್ರು. ರೋಹಿತ್ ಶರ್ಮಾ ಆಫ್‌ ಸೆಂಚುರಿ ಸಿಡಿಸಿದ್ರೆ, ಧವನ್ 30 ರನ್‌ಗಳ ಕಾಣಿಕೆ ನೀಡಿದರು. ನಂತರ ಬಂದ ಯಂಗ್ ಟೈಗರ್ ರಿಷಬ್ ಪಂತ್ ಅಜೇಯ 40 ರನ್‌ಗಳನ್ನ ಸಿಡಿಸಿದರು. ಪಂತ್‌ಗೆ ಧೋನಿ ಉತ್ತಮ ಸಾಥ್ ನೀಡಿದ ಪರಿಣಾಮ ಅಂತಿಮವಾಗಿ ಭಾರತ ತಂಡ, 18.5 ಓವರ್‌ಗಳಲ್ಲೇ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು.

ಮೂರು ವಿಕೆಟ್ ಕಬಳಿಸಿದ ಕೃನಾಲ್ ಪಾಂಡ್ಯಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.