ಹೆಂಡತಿ ಸಾಯಿಸಿ ತುಂಡು ತುಂಡಾಗಿ ಕತ್ತರಿಸಿ ಸಿಕ್ಕಿಬಿದ್ದ ಚಿತ್ರ ನಿರ್ದೇಶಕ

ಚೆನ್ನೈ: ಕಾಲಿವುಡ್ ಚಿತ್ರ ನಿರ್ದೇಶಕನೊಬ್ಬ ತಾನು ಮಾಡುವ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳಬೇಕಿತ್ತು ಆದರೆ ದುರದೃಷ್ಟಕರ ವಿಷಯ ಅಂದ್ರೆ ತನ್ನ ಹೆಂಡತಿಯನ್ನು ತುಂಡು ತಂಡಾಗಿ ಕತ್ತಿರಿಸುವ ಮೂಲಕ ಪೊಲೀಸರ ಅತಿಥಿಯಾಗಿದ್ದಾನೆ.

ಕಾಲಿವುಡ್ ಇಂಡಸ್ಟ್ರೀಸ್ ನಲ್ಲಿ ಸಹಾಯ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಕೃಷ್ಣನ್ ಎಂಬಾತ ತನ್ನ ಹಂಡತಿಯನ್ನು ಮೇಲೆ ಅನುಮಾನ ಪಟ್ಟು ಈ ಕೃತ್ಯ ಎಸಗಿದ್ದಾನೆ. ಹೆಂಡತಿಯನ್ನು ಕೊಂದು ದೇಹವನ್ನು ತಂಡು ತಂಡಾಗಿ ಕತ್ತಿರಿಸಿ  ಅದನ್ನು ಕಸಕ್ಕೆ ಹಾಕಿದ್ದ ಈಗ ಆ ನಿರ್ದೇಶಕನನ್ನು ತಮಿಳುನಾಡಿ ಪೊಲೀಸರು ಬಂಧಿಸಿದ್ದಾರೆ.

ತನಗಿಂತ ಬಹಳ ಚಿಕ್ಕವಯಸ್ಸಿನ  ಸಂಧ್ಯಾ(35), ಎಂಬುವವಳನ್ನು ಮದುವೆಯಾಗಿದ್ದ ಬಾಲಕೃಷ್ಣ ಕೃಷ್ಣನ್ (51), ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆಕೆ ಮೇಲೆ ಅನುಮಾನದ ಭೂತವನ್ನು ಛೂ..ಬಿಟ್ಟಿದ್ದ, ಪೊಂಗಲ್ ಹಬ್ಬ ಆಚರಣೆಗೆಂದು ಊರಿನಲ್ಲಿದ್ದ ಹೆಂಡತಿಯನ್ನು ಚೆನ್ನೈಗೆ ಕರಸಿಕೊಂಡು ಆಕೆಯೊಂದಿಗೆ ಜಗಳ ಶುರು ಮಾಡಿದ್ದ, ಜ.18ರಂದು  ಈ ಜಗಳ ತಾರಕಕ್ಕೇರಿದ ಪರಿಣಾಮ ಆತ ಆಕೆಯ ಮೇಲೆ ಹಲ್ಲೆ  ಮಾಡಿ ಹತ್ಯೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಏನು ಮಾಡಬೇಕು ಎಂದು ತಿಳಿಯದೇ ಯಾವುದೇ ಕುರುಹುಗಳನ್ನು ಸಿಗಬಾರದು ಎಂಬ ಕಾರಣಕ್ಕೆ ಆಕೆಯ ದೇಹವನ್ನು ತಂಡು ತುಂಡಾಗಿ ಕತ್ತರಿಸಿ ಒಂದೂಂದು ಮೂಲೆಗೆ  ಎಸೆದಿದ್ದಾನೆ.

ಕೈ ಕಾಲುಗಳನ್ನು ಕೊಡಂಬಕಮ್  ಹಾಗೂ ಪೆರುಗುಂಡಿಯಲ್ಲಿ ಲಭ್ಯವಾಗಿದೆ. ಉಳಿದ ದೇಹದ ಭಾಗಗಳು ಕಾರ್ಪೊರೇಷನ್  ಕಸದ ರಾಶಿಯಲ್ಲಿ ಪತ್ತೆಯಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಪೊರೇಷನ್ ಕಸದ ರಾಶಿಯಲ್ಲಿ ಮೃತದೇಹದ ತಂಡುಗಳು ಸಿಬ್ಬಂದಿಗಳಿಗೆ ಕಾಣುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಧ್ಯಾ ಕೈಯಲ್ಲಿ ಇದ್ದ ಟ್ಯಾಟುವಿನಿಂದ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕೃಷ್ಣ ಕೃಷ್ಣನ್ ಕೂಡ ಈ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

2010ರಲ್ಲಿ ಬಾಲಕೃಷ್ಣ ಕೃಷ್ಣನ್ ಚಿತ್ರ ನಿರ್ಮಾಣ ಮಾಡಿದ್ದ ಇದಕ್ಕೆ ಸಂಧ್ಯಾ ಹಣ ಹೂಡಿಕೆ ಮಾಡಿದ್ದರು ಆದರೆ, ಬಳಿಕ ಆತ ಅನಿವಾರ್ಯವಾಗಿ ಸಹಾಯಕ ನಿರ್ದೇಶಕನಾಗಿ ಕೆಲಸ  ಮಾಡುವ  ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದಾದ ಬಳಿಕವೂ ಇವರಿಬ್ಬರ ನಡುವೆ ಸಂಬಂಧ ಚನ್ನಾಗಿರಲಿಲ್ಲ ಇದಲ್ಲದೇ ಇಬ್ಬರು ಕೂಡ ಡೈವರ್ಸ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ತೂತುಕೂಡಿಯಲ್ಲಿ ಸಂಧ್ಯಾ  ವಾಸವಾಗಿದ್ದಳು.

ಈ ಪ್ರಕರಣಕ್ಕೆ ಸಹಾಯ ಮಾಡಿದ್ದ ಬಾಲಕೃಷ್ಣ ಕೃಷ್ಣನ್ ಗೆಳೆಯರು ಕೂಡ ಪೊಲೀಸರು ಬಂಧಿಸಿದ್ದಾರೆ.

Recommended For You

Leave a Reply

Your email address will not be published. Required fields are marked *