Top

ಐಸಿಯುನಲ್ಲಿ ಪ್ರಖ್ಯಾತ ಗಾಯಕ ಸೋನು ನಿಗಮ್‌ಗೆ ಚಿಕಿತ್ಸೆ..!

ಐಸಿಯುನಲ್ಲಿ ಪ್ರಖ್ಯಾತ ಗಾಯಕ ಸೋನು ನಿಗಮ್‌ಗೆ ಚಿಕಿತ್ಸೆ..!
X

ಭಾರತೀಯ ಚಿತ್ರರಂಗದ ಪ್ರಖ್ಯಾತ ಗಾಯಕ ಸೋನು ನಿಗಮ್, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಒಡಿಸ್ಸಾಕ್ಕೆ ಹೋದಾಗ ಸೋನು ನಿಗಮ್ ಅಲ್ಲಿ ಸಮುದ್ರ ಆಹಾರ(sea food) ಸೇವಿಸಿ, ಅಲರ್ಜಿಯಾಗಿದ್ದು, ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋನು ನಿಗಮ್‌ಗೆ ಇನ್ನು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯಲಿದ್ದು, ಈ ಅಲರ್ಜಿಯಿಂದ ಗಾಯಕನ ಎಡಗಣ್ಣು ಊದಿಕೊಂಡಿದ್ದು, ಉಸಿರಾಟದ ತೊಂದರೆಯೂ ಆಗಿತ್ತಂತೆ.

ಇನ್ನು ಈ ಬಗ್ಗೆ ಸೋನು ನಿಗಮ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ ಅಭಿಮಾನಿಗಳಿಗೆ, ಮಿತ್ರರಿಗೆ, ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಅಲ್ಲದೇ, ಯಾವುದಾದರೂ ಆಹಾರ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದೆಂದು ತಿಳಿದಿದ್ದರೆ, ಆ ಆಹಾರವನ್ನು ಸೇವಿಸದಿರುವುದು ಒಳಿತು. ನನಗೆ ಈ ರೀತಿಯಾದಾಗ ನಾನಾವತಿ ಆಸ್ಪತ್ರೆ ಸಮೀಪದಲ್ಲಿರದಿದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತೋ ಏನೋ ಎಂದು ಹೇಳಿದ್ದಾರೆ.

Next Story

RELATED STORIES