ಮೊದಲ ಟಿ-20 ಪಂದ್ಯ ಭಾರತ ವಿರುದ್ಧ ನ್ಯೂಜಿಲೆಂಡ್ ಗೆ ಭರ್ಜರಿ ಗೆಲುವು

ವೆಲ್ಲಿಂಗ್ಟನ್: ಇಂದು ನಡೆದ ಭಾರತ ಹಾಗೂ ಕಿವೀಸ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತ 80ರನ್ ಗಳ ಅಂತರದಿಂದ ಸೋಲು ಅನುಭವಿಸಿದೆ.

ಟಾಸ್ ಗೆದ್ದ ಭಾರತ ನ್ಯೂಜಿಲೆಂಡ್ ಗೆ ಬ್ಯಾಟ್ ಮಾಡಲು ಬಿಟ್ಟಿತ್ತು. ಕಿವೀಸ್ ನ ಆರಂಭಿಕ ಬ್ಯಾಟ್ಸ್ ಮೆನ್ ಗಳು ಭರ್ಜರಿ ಜೊತೆಯಾಟ  ನಡೆಸಿದ ಟಿಮ್ ಸೇಪರ್ಟ್ 84 ರನ್ ಗಳನ್ನು ಸಿಡಿಸಿದರು ಕೂಲಿನ್ ಮನ್ರೋ 34ರನ್ ಗಳಿಸಿ ಇವರಿಬ್ಬರ ಆಟದಿಂದ  ಮೊದಲ ವಿಕೆಟ್ ಗೆ  86ರನ್ ಗಳನ್ನು ಕಲೆಹಾಕಿತ್ತು. ನಂತರ ಬಂದ ಕಿವೀಸ್ ನಾಯಕ ಕೆನ್ ವಿಲಿಯಮ್ಸನ್ 34, ರೊಸ್ ಟ್ರೇಲರ್ 23 ರನ್ ಗಳನ್ನು ಬಾರಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಕೊನೆಯ ಓವರ್ ನಲ್ಲಿ ಸ್ಕಟ್ ಅಮೋಘ ಬ್ಯಾಟಿಂಗ್ ನಿಂದ ಕೇವಲ 7 ಎಸೆತಗಳಲ್ಲಿ 20ರನ್ ಗಳನ್ನು ಸಿಡಿಸಿ ಕಿವೀಸ್ 6 ವಿಕೆಟ್ ನಷ್ಟಕ್ಕೆ 219ರನ್ ಗಳನ್ನು ದಾಖಲಿಸಿತ್ತು.

ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 2, ಭುವನೇಶ್ವರ್ ಕುಮಾರ್, ಖಲಿಲ್, ಕೃನಲ್ ಪಾಂಡ್ಯ, ಯುಜುವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು.

ಬೃಹತ್ ಮೊತ್ತ ಬೆನ್ನತ್ತಿದ್ದ ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ, ಶಿಖರ್ ಧವನ್ ಇನ್ನಿಂಗ್ಸ್ ಕಟ್ಟುವುದರಲ್ಲಿ ವಿಫಲರಾದರು. ಶರ್ಮಾ ಕೇವಲ 1ರನ್ ಗಳಿಸಿದರೆ ಧವನ್ 29 ರನ್ ಗಳನ್ನು ಗಳಿಸಿ ಪೆವಿಲಿಯನ್ ಸೇರಿಕೊಂಡರು. ವಿಜಯ್ ಶಂಕರ್ ಸಹ ಕೆಲಹೊತ್ತು ಕ್ರೀಸ್ ನಲ್ಲಿ ಬಡಿದಾಡಿದ ಪರಿಣಾಮ 27ರನ್ ಗಳಿಗೆ ತೃಪ್ತಿಪಟ್ಟು ವಿಕೆಟ್ ಒಪ್ಪಿಸಿದರು. ನಂತರದ ಧೋನಿ ಕೊನೆಯ ತನಕ ನಿಂತರು ಸಹ ಮ್ಯಾಚ್ ವಿನ್ ಮಾಡಿಸಲು ವಿಫಲರಾಗಿ 39ರನ್ ಗಳಿಗಷ್ಟೇ ಸಿಮೀತವಾದರು. ಒಟ್ಟಾರೆ ಟೀಂ ಇಂಡಿಯಾ 19.2 ಓವರ್ ನಲ್ಲಿ ಸರ್ವಪತನಗೊಂಡು ಕಿವೀಸ್ ಗೆ ಶರಣಾಯ್ತು.

ಕೀವಿಸ್ ಪರ ಬೌಲಿಂಗ್ ನಲ್ಲಿ ಮಿಂಚಿದ ಟಿಮ್ ಸೋಥಿ 3, ಲೊಕೀ, ಮಿಚಿಲ್, ಇಸ್ ಸೊಧಿ ತಲಾ 2 ವಿಕೆಟ್ ಪಡೆದರು. ನ್ಯೂಜಿಲೆಂಡ್ ಟಿ-20ನಲ್ಲಿ 1-0ಯಿಂದೆ ಮುನ್ನಡೆ ಕಾಯ್ದುಕೊಂಡಿದೆ.