ಸುಮಲತಾ ಮಂಡ್ಯದ ಗೌಡತಿ ಅಲ್ಲ.. ಆಂಧ್ರದವರು : ಕೆ.ಟಿ.ಶ್ರೀಕಂಠೇಗೌಡ

ಅಂಬರೀಶ್ ಬದುಕಿದ್ದಾಗ ಸ್ಪಷ್ಟವಾಗಿ ಹೇಳಿದರು ನನ್ನ ಮನೆಗೆ ರಾಜಕಾರಣ ಕೊನೆಯಾಗಲಿ ಎಂದು ಸುಮಲತಾ ಎಂದೂ ಕೂಡ ಮಂಡ್ಯದ ಗೌಡತಿ ಅಲ್ಲ, ಸುಮಲತಾ ಮೂಲ ಆಂಧ್ರ ಪ್ರದೇಶ ಎಂದು ಜೆಡಿಎಸ್ ಎಂ.ಎಲ್.ಸಿ. ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ರಮ್ಯಾರನ್ನು ನೋಡಿ ಆಗಿದೆ. ಅವರು ಎಷ್ಟರ ಮಟ್ಟಕ್ಕೆ ನಮ್ಮ ಕೆಲಸ ಮಾಡಿಕೊಟ್ಟರು ಎಂದು. ಅಂಬರೀಶ್ ಕಡೆ ದಿನಗಳಲ್ಲಿ ಮಂಡ್ಯದಿಂದ ಏಕೆ ಚುನಾವಣೆಗೆ ನಿಲ್ಲಲಿಲ್ಲ, ಜನ ಸೋಲಿಸ್ತಾರೆ ಅಂತ ಅಂಬಿಗೆ ಚೆನ್ನಾಗಿಯೇ ಗೊತ್ತಿತ್ತು. ಅದಕ್ಕೆ ಅಂಬಿ ಕ್ಷೇತ್ರಕ್ಕೆ ಬರಲಿಲ್ಲ ಎಂದರು.
ನಾವು ರಮ್ಯಾರಿಂದ ಪಾಠ ಕಲಿತಿದ್ದೇವೆ. ರಾಜಕಾರಣ ಹುಡುಗಾಟ ಅಲ್ಲ. ಜನರ ನೋವಿಗೆ ಸ್ಪಂದಿಸೋರು ನಮಗೆ ಬೇಕು. ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಮಂಡ್ಯ ಜನ ಸಾಕಷ್ಟು ನೋವು ಉಂಡಿದ್ದಾರೆ. ಎಲ್ಲೋ ಕೂತು ಸ್ಪರ್ಧೆ ಮಾಡ್ತೇನೆ ಎನ್ನುವವರನ್ನು ಮಂಡ್ಯ ಜನ ಗೆಲಿಸಲ್ಲ ಎಂದರು.
ದೇವೇಗೌಡರ ಕುಟುಂಬ ಸೇವೆಯಿಂದ ಬೆಳೆದು ಬಂದಿದೆ. ನಿಖಿಲ್ ಕುಮಾರ್ ಮಂಡ್ಯದಿಂದ ಸ್ಪರ್ಧಿಸಲು ಅರ್ಥವಿದೆ. ನಿಖಿಲ್ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದಾರೆ. ಆದರೆ ಸುಮಲತಾ ಗೆದ್ದ ಮೇಲೆ ಅವರನ್ನು ಎಲ್ಲಿ ಹುಡುಕಲು ಸಾಧ್ಯ, ಮಂಡ್ಯ ಕ್ಷೇತ್ರ ಕಾಂಗ್ರೆಸ್ ಗೆ ಹೋಗುತ್ತೋ, ಜೆಡಿಎಸ್ ಗೆ ಸಿಗುತ್ತೋ ನನಗೆ ಗೊತ್ತಿಲ್ಲ ಎಂದರು.