ವಿಕೆಟ್ ಹಿಂದೆ ಧೋನಿ ಇದ್ದಾಗ ಕ್ರೀಸ್ ಬಿಡಬೇಡಿ: ಐಸಿಸಿ ಟ್ವೀಟ್ ಗೆ ಪ್ರಶಂಸೆ

ವೆಲ್ಲಿಂಗ್ಟನ್ : ಸ್ಟಂಪ್ ಹಿಂದೆ ಮಹೇಂದ್ರ ಸಿಂಗ್ ಧೋನಿ ಇರಬೇಕಾದರೆ ಬ್ಯಾಟ್ ಮಾಡುವವರು ಕ್ರೀಸ್ ಬೇಡಬೇಡಿ ಎಂದು ಐಸಿಸಿ ಮಾಡಿದ್ದ ಟ್ವೀಟ್ ಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.

ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ 35ರನ್ ಗಳ ಅಂತರದಿಂದ ಜಯ ಗಳಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ  ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂಬಾಟಿ ರಾಯುಡು ಹಾಗೂ ಆಲೌರೌಂಡರ್ ಹಾರ್ದಿಕ್ ಪಾಂಡ್ಯ ಅವರ ಉತ್ತಮ ಆಟದ ನೆರವಿನಿಂದ 49.2 ಓವರ್ ಗೆ  ಭಾರತ 252ರನ್ ಗಳಿಸಿ ಆಲೌಟ್ ಆಗಿತ್ತು.

ಈ ಗುರಿಯನ್ನು ಬೆನ್ನತ್ತಿದ್ದ ಕಿವೀಸ್ ಬ್ಯಾಟ್ಸ್ ಮೆಗಳನ್ನು ಭಾರತದ ಬೌಲರ್ ಗಳು ಕಟ್ಟಿಹಾಕಿದರು ಕೂಡ ನ್ಯೂಜಿಲೆಂಡ್ ಗೆ ಆಸೆರೆಯಾಗಿ ನಿಂತ ಆಲ್ ರೌಂಡರ್ ಜಿಮ್ಮಿ ನಿಶಾಮ್ ಅವರನ್ನು ಕೇದಾರ್ ಜಾಧವ್ ಎಸೆದ 37ನೇ ಓವರ್ ನಲ್ಲಿ ಧೋನಿ ರನೌಟ್  ಮಾಡಿದರು. ಬಳಿಕ ಕ್ರೀಸ್ ಗೆ ಬಂದ ಆಟಗಾರರು ಹೆಚ್ಚು ಹೊತ್ತು ನಿಲ್ಲದೆ 44.1 ಓವರ್ ಗಳಲ್ಲಿ 217 ರನ್ ಗಳಿಸಿ ಆಲೌಟ್ ಆಯಿತ್ತು.

ಧೋನಿ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮಾಡಿದ್ದ ಟ್ವೀಟ್ ಗೆ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಐದು ಏಕದಿನ ಪಂದ್ಯ ಸರಣಿಯಲ್ಲಿ ಭಾರತ 4-1ರಲ್ಲಿ ಗೆದ್ದುಕೊಂಡಿತ್ತು.