ತಮ್ಮ ಮದುವೆಗೆ ಈ ಜೋಡಿ ಕೇಳಿದ ಉಡುಗೊರೆ ಏನು ಗೊತ್ತಾ..?

ದಾವಣಗೆರೆ: ಕೆಲ ದಿನಗಳ ಹಿಂದಷ್ಟೇ ಗುಜರಾತ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವರಾಜ್ ಮತ್ತು ಸಾಕ್ಷಿ ಎಂಬ ಜೋಡಿ, ಡಿಫ್ರೆಂಟ್‌ ಆಗಿ ತಮ್ಮ ಮದುವೆ ಆಮಂತ್ರಣ ಪತ್ರವನ್ನ ಪ್ರಿಂಟ್ ಮಾಡಿಸಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಓಟ್ ಹಾಕುವಂತೆ ಮನವಿ ಮಾಡಿದ್ದರು.

ಅಲ್ಲದೇ ರಫೆಲ್ ಡೀಲ್ ಬಗ್ಗೆ ವಿವರಣೆಯನ್ನೂ ನೀಡಿದ್ದರು. ಇನ್ನು ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಈ ಜೋಡಿಗೆ ಶುಭಹಾರೈಸಿ, ಧನ್ಯವಾದ ಸಲ್ಲಿಸಿದ್ದರು.

ಇದೀಗ ದಾವಣಗೆರೆಯ ನಾಗರಾಜ್ ಮತ್ತು ರೇಖಾ ಜೋಡಿ ಇದೇ ಫೆಬ್ರವರಿ 8ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಮೋದಿಗೆ ಬೆಂಬಲ ಸೂಚಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಓಟ್ ಹಾಕುವುದೇ ನೀವು ನಮಗೆ ಕೊಡುವ ಉಡುಗೊರೆ ಎಂದು ಹೇಳಿದ್ದು, ಆಮಂತ್ರಣ ಪತ್ರಿಕೆಯ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದೆ.