ಸಿದ್ದಗಂಗಾ ಶಿವಕುಮಾರ ಶ್ರೀಗಳ ದಿನಚರಿ ಹೇಗಿತ್ತು ಗೊತ್ತಾ.?

ತುಮಕೂರು : ಸಿದ್ದಗಂಗಾ ಮಠಕ್ಕೆ 8 ದಶಕಗಳ ಕಾಲ ಶಿಕ್ಷಣ, ಅನ್ನದಾಸೋಹ ಸೇವೆಗಾಗಿ ಅಹರ್ನಿಶಿ ದುಡಿದ ಕಾಯಕ ಯೋಗಿ ಡಾ ಶಿವಕುಮಾರ ಸ್ವಾಮೀಜಿ ನಮ್ಮನ್ನು ಅಗಲಿದ್ದಾರೆ.

ಆದರೇ ಅವರು ದಿನದ ಮೂರು ಹೊತ್ತು ಇಷ್ಟಲಿಂಗ ಪೂಜೆ, ಜಪ-ತಪಗಳಿಂದ ಗಳಿಸಿದ ಶಕ್ತಿಯನ್ನೆಲ್ಲ ಲೋಕಸೇವೆಗಾಗಿಯೇ ಧಾರೆ ಎರೆದು ಭಕ್ತರ ಪಾಲಿಗೆ ನಡೆದಾಡುವ ದೇವರೆಂದೇ ಪ್ರಸಿದ್ದರಾಗಿದ್ದಾರೆ.

ಇಂತಹ ಲಕ್ಷಾಂತರ ಮಕ್ಕಳಿಗೆ ಅನ್ನ, ಅರಿವು ನೀಡಿ ತಾಯಿಯಂತೆ ಪೊರೆದ ಸ್ವಾಮೀಜಿ ದಿನಚರಿ ಹೇಗಿತ್ತು ಎಂಬ ಬಗ್ಗೆ ಕುತೂಹಲ ಮಾಹಿತಿ ಈ ಕೆಳಗಿದೆ ಓದಿ..

ಕಾರುಣ್ಯದ ನಿಧಿ, ಕಲ್ಯಾಣದ ಪ್ರತಿರೂಪದ ಸಿದ್ದಗಂಗಾ ಶಿವಕುಮಾರಸ್ವಾಮೀಜಿ ದಿನಚರಿ

 • ಶಿವಕುಮಾರ ಸ್ವಾಮೀಜಿಗಳ ಮೊದಲ ದಿನಚರಿ ಬೆಳಗಿನ ಜಾವ 2.15ಕ್ಕೆ ಆರಂಭವಾಗುತ್ತಿತ್ತು.
 • ಹೀಗೆ ಆರಂಭವಾದ ಶ್ರೀಗಳ ದಿನಚರಿ 2.45ರ ಶರಣರು, ಸಂತರ ತತ್ವಪಠಣದ ಮೂಲಕ ಪ್ರಾರಂಭ
 • ಬೆಳಿಗ್ಗೆ ಮೂರು ಗಂಟೆಗೆ ನಿತ್ಯ ವಿಧಿ
 • 3 ರಿಂದ 5.30ಕ್ಕೆ ಶಿವ ಪೂಜೆ, ಲಘು ಪ್ರಸಾದ ಸ್ವೀಕಾರ ಕಾರ್ಯ ನಡೆಸುತ್ತಿದ್ದರು.
 • 5.30ರಿಂದ 6ಕ್ಕೆ ವಿದ್ಯಾರ್ಥಿಗಳ ಜೊತೆಯಲ್ಲಿ ಬೆರೆಯುತ್ತಿದ್ದ ಶ್ರೀಗಳು, ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುತ್ತಿದ್ದರು.
 • 6.15 ರಿಂದ 7.40ರ ವರೆಗೆ ಮಠದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮತ್ತು ಸಂಸ್ಕೃತ ಪಾಠ ಮಾಡಿ ಕಲಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.
 • 7.40 ರಿಂದ 7.50ರ ವರೆಗೆ ವಿವಿಧ ದಿನಪತ್ರಿಕೆಗಳನ್ನು ಓದುತ್ತಿದ್ದರು.
 • 7.50 ರಿಂದ 8.40ರ ವರೆಗೆ ಯಾವುದಾದರೂ ಪತ್ರ ಬರೆಯುವುದಿದ್ದರೇ ಬರೆಯುವುದರಲ್ಲಿ ತೊಡಗುತ್ತಿದ್ದರು.
 • 8.40 ರಿಂದ 9ರ ವರೆಗೆ ಹೀಗೆ ಬರೆದ ಪತ್ರಗಳನ್ನು ಟಪಾಲಿಗೆ ತಲುಪಿಸುವ ಕಾರ್ಯ ನಡೆಸುತ್ತಿದ್ದರು.
 • 9ರಿಂದ 9.10ರ ವರೆಗೆ ಪ್ರಸಾದ ವ್ಯವಸ್ಥೆಯನ್ನು ಖುದ್ದು ಶ್ರೀಗಳೇ ಮುಂದೆ ನಿಂತು ಪರಿಶೀಲಿಸುವ ಕಾರ್ಯದಲ್ಲಿ ನಿರತರಾಗುತ್ತಿದ್ದರು.
 • 9.10ರಿಂದ 9.30ರ ವರೆಗೆ ದಿನ ನಿತ್ಯದ ದೈನಂದಿನ ಬದುಕಿನಲ್ಲಿ ಸಿದ್ದಗಂಗಾ ಕ್ಷೇತ್ರದಲ್ಲಿನ ಕಾರ್ಯಗಳ ಬಗ್ಗೆ ಅವಲೋಕಿಸುತ್ತಿದ್ದರು.
 • 9.30ರಿಂದ 10.30ಕ್ಕೆ ವಿವಿಧ ಕಡೆಗಳಿಂದ ಶ್ರೀಗಳಿಗೆ ಬಂದಂತ ಪತ್ರಗಳಿಗೆ ಉತ್ತರಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತಿದ್ದರು.
 • 10.30ರಿಂದ 10.45ಕ್ಕೆ ವಿದ್ಯಾರ್ಥಿಗಳ ಊಟದ ವ್ಯವಸ್ಥೆಯನ್ನು ಪರೀಶಿಲನೆ ನಡೆಸುತ್ತಿದ್ದರು.
 • 10.45ರಿಂದ 12ರ ವರೆಗೆ ತಮ್ಮ ಕಾರ್ಯಾಲಯದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದರು.
 •  ಮಧ್ಯಾಹ್ನ 12ರಿಂದ 1ರ ವರೆಗೆ ಮಂಚದ ಹತ್ತಿರ ಯಂತ್ರಧಾರಣೆ
 • 1ರಿಂದ 2.30ರ ವರೆಗೆ ಭಕ್ತರಿಗೆ ದರ್ಶನ ಹಾಗೂ ಕಾರ್ಯಾಲಯದಲ್ಲಿನ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.
 • 2.30ರಿಂದ 3.30ರ ವರೆಗೆ ಕಾಯಕ ಯೋಗಿ ಪೂಜೆ ಮತ್ತು ಪ್ರಸಾದ ಸ್ವೀಕಾರದಲ್ಲಿ ನಿರತರಾಗುತ್ತಿದ್ದರು.
 • 3.30ರಿಂದ 5.30ರವರೆಗೆ ಮರಳಿ ಕಾರ್ಯಾಲಯದಲ್ಲಿನ ಸಂಸ್ಥೆಯ ಕಾರ್ಯನಿರ್ವಹಣೆಯ ಪರಿಶೀಲನೆ.
 • ಸಂಜೆ 5.30ರಿಂದ 5.45ರ ಸಮಯದಲ್ಲಿ ಪ್ರಸಾದ ಸಿದ್ದತೆಯ ಪರಿಶೀಲನೆ
 • 5.45ರಿಂದ 6.30ರ ವರೆಗೆ ಮಠದ ಅವರಣದಲ್ಲಿದ್ದ ಗದ್ದೆ ತೋಟ, ಕಟ್ಟಡಗಳ ಮೇಲ್ವಿಚಾರಣೆಯಲ್ಲಿ ತೊಡಗುತ್ತಿದ್ದರು.
 • 6.30ರಿಂದ 7ಕ್ಕೆ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ನಿರತರಾಗುತ್ತಿದ್ದರು.
 • 7ರಿಂದ 7.15ಕ್ಕೆ ವಿದ್ಯಾರ್ಥಿಗಳಿಗೆ ಆಶೀರ್ವಚನ
 • 7.15ರಿಂದ 7.45ರ ವರೆಗೆ ಮಠಕ್ಕೆ ದರ್ಶನಕ್ಕಾಗಿ ಬರುವ ಭಕ್ತರಿಗೆ ದರ್ಶನದಲ್ಲಿ ನೀಡುವುದರಲ್ಲಿ ನಿರತರಾಗುತ್ತಿದ್ದರು.
 • 7.45ರಿಂದ 8ರ ವರೆಗೆ ಪ್ರಸಾದ ನಿಲಯದಲ್ಲಿನ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸುತ್ತಿದ್ದರು.
 • 8ರಿಂದ 8.30ರ ವರೆಗೆ ಕಾರ್ಯಾಲಯದ ವ್ಯವಹಾರದ ಮೇಲ್ವಿಚಾರಣೆ
 • 8.30ರಿಂದ 8.45ರ ವರೆಗೆ ಶರಣರ ತತ್ವಗಳ ಪಠಣ
 • 8.45ರಿಂದ 9ಕ್ಕೆ ಸ್ನಾನ
 • 9ರಿಂದ 10 ಗಂಟೆಯ ವರೆಗೆ ಪೂಜೆ, ಲಘು ಪ್ರಸಾದ ಸ್ವೀಕಾರ ನಡೆಸುತ್ತಿದ್ದರು.
 • 10ರಿಂದ 10.30ರ ವರೆಗೆ ಮಠದ ವಿದ್ಯಾರ್ಥಿಗಳು ನಡೆಸುತ್ತಿದ್ದ ನಾಟಕ ಅಭ್ಯಾಸದ ಮೇಲ್ವಿಚಾರಣೆ ನಡೆಸುತ್ತಿದ್ದರು.
 • 10.30ರಿಂದ 10.45ರ ವರೆಗೆ ಇಡೀ ದಿನ ನಡೆದ ಘಟನೆಗಳನ್ನು ದಿನಚರಿಯಲ್ಲಿ ಚಾಚೂ ತಪ್ಪದೇ ಬರೆದು ಇಡುತ್ತಿದ್ದರು.
 • 11ಕ್ಕೆ ಶಿವಕುಮಾರಸ್ವಾಮೀಜಿ ವಿಶ್ರಾಂತಿ ಪಡೆಯುತ್ತಿದ್ದರು.

ಇದು ಕಳೆದ ನಿನ್ನೆ ಲಿಂಗೈಕ್ಯರಾದ ಶಿವಕುಮಾರ ಸ್ವಾಮೀಜಿಯವರ ದಿನ ನಿತ್ಯದ ದಿನಚರಿಯಾಗಿತ್ತು. ಈ ದಿನಚರಿಯ ನಡುವೆಯೂ, ಬಿಡುವು ಮಾಡಿಕೊಂಡು ಶ್ರೀಗಳನ್ನು ಕಾಣಲು ಬರುತ್ತಿದ್ದ ಭಕ್ತರನ್ನು ಕಾಣಲು ಕೋರಿಕೆಯ ಮೇರೆಗೆ ತೆರಳಿ, ಸಾರ್ವಜನಿಕರಿಗೆ ದರ್ಶನ ನೀಡುತ್ತಿದ್ದರು. ಜೊತೆಗೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ, ಭಕ್ತರ ಸಮಸ್ಯೆಗಳನ್ನು ಬಗೆ ಹರಿಸುವ ಕಾರ್ಯದಲ್ಲೂ ನಿರತರಾಗುತ್ತಿದ್ದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.