ಹೋಗುವಾಗ ವಿದ್ಯಾರ್ಥಿ, ಸೆಂಟ್ರಲ್‌ ಕಾಲೇಜಿಗೆ ಮರಳಿ ಬರುವಾಗ ಸ್ವಾಮೀಜಿ.!

ಬೆಂಗಳೂರು : 1930ರಲ್ಲಿ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾಗಿದ್ದ ಮರುಳಾರಾಧ್ಯರು ಅನಾರೋಗ್ಯದಿಂದ ಶಿವೈಕ್ಯರಾಗಿದ್ದರು. ಈ ವೇಳೆ ಅವರ ಒಡನಾಟವನ್ನು ಇರಿಸಿಕೊಂಡಿದ್ದ ಭಕ್ತರಲ್ಲಿ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿ ಕೂಡ ಒಬ್ಬರಾಗಿದ್ದರು.

ತುಮಕೂರಿನ ಕಿರಿಯ ಸ್ವಾಮೀಜಿಗಳಾದ ಮರುಳಾರಾಧ್ಯರು ಶಿವೈಕ್ಯರಾದ ವಿಷಯ ತಿಳಿದು ಅಂತಿಮ ದರ್ಶನಕ್ಕೆ ತೆರಳಿದ ಆ ವಿದ್ಯಾರ್ಥಿ, ಮರಳಿ ಕಾಲೇಜಿಗೆ ತೆರಳಿದ್ದು ಸನ್ಯಾಸಿಗಳಾಗಿ, ಸ್ವಾಮೀಜಿಯಾಗಿ.

ಹೀಗೆ ಹೋಗುವಾಗ ವಿದ್ಯಾರ್ಥಿಯಾಗಿ, ಬರುವಾಗ ಸ್ವಾಮೀಜಿಗಳಾಗಿ ಬಂದವರೇ.. ಮೂರನೇ ವರ್ಷದ ಬಿಎ ಆನರ್ಸ್‌ ವಿದ್ಯಾರ್ಥಿ, ಶಿವಣ್ಣ. ಇಂತಹ ಶಿವಣ್ಣ ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಮರುಳಾರಾಧ್ಯರ ಅಂತ್ಯ ಕ್ರಿಯೆ ಮುಗಿಸಿ ಸೆಂಟ್ರಲ್ ಕಾಲೇಜಿಗೆ ಮರಳಿದ್ದು, ಸನ್ಯಾಸಿಗಳಾಗಿ, ಶಿವಕುಮಾರ ಸ್ವಾಮೀಜಿಯಾಗಿ.

ಅಂದಹಾಗೇ.. ಸಿದ್ದಗಂಗಾ ಮಠದ ಹಿರಿಯ ಯತಿಗಳಾಗಿದ್ದ ಉದ್ದಾನ ಶಿವಯೋಗಿ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಯಾಗಿದ್ದ ಮರುಳಾರಾಧ್ಯರು ಶಿವಣ್ಣ ಅವರಿಗೆ ಅಚ್ಚು ಮೆಚ್ಚಿನ ಸ್ವಾಮೀಗಳಾಗಿದ್ದರು.

ಇದೇ ಕಾರಣಕ್ಕಾಗಿಯೇ ಆಗಾಗ ಸಿದ್ದಗಂಗಾ ಮಠಕ್ಕೆ ಹೋದಾಗ ಭೇಟಿಯಾಗಿ ಬರುತ್ತಿದ್ದರು. ಈ ವೇಳೆ ಹಿರಿಯ ಯತಿಗಳು ಹಾಗೂ ಕಿರಿಯ ಶ್ರೀಗಳ ಸಖ್ಯ ಶಿವಣ್ಣ ಅವರನ್ನು ಬೆಸೆದು ಬಿಟ್ಟಿತ್ತು.

ಕಿರಿಯ ಸ್ವಾಮೀಜಿಗಳಾಗಿದ್ದ ಮರುಳಾರಾಧ್ಯರು ಶಿವೈಕ್ಯರಾದ ಸಂದರ್ಭದಲ್ಲಿ, ಅಂತ್ಯಕ್ರಿಯೆಗೆ ಬಂದಿದ್ದ ಶಿವಣ್ಣ ಅವರನ್ನು ಗಮನಿಸಿದ್ದ ಹಿರಿಯ ಯತಿಗಳಾಗಿದ್ದ ಉದ್ದಾನ ಶಿವಯೋಗಿಗಳು, ಕೆಲವು ವಿಷೇಶತೆಗಳನ್ನು ಗಮನಿಸಿದ್ದರು.

ಅಲ್ಲದೇ ಶಿವಣ್ಣ ಅವರನ್ನು ಚೆನ್ನಾಗಿಯೇ ಬಲ್ಲವರಾಗಿದ್ದ ಹಿರಿಯ ಯತಿ ಉದ್ದಾನ ಶಿವಯೋಗಿಗಳು, ಕಿರಿಯ ಶ್ರೀಗಳ ಅಂತ್ಯಕ್ರಿಯ ಬಳಿಕ, ಎಲ್ಲರ ಸಮ್ಮುಖದಲ್ಲಿಯೇ ಶಿವಣ್ಣನೇ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು.

ಹೀಗಾಗಿ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾಗಿದ್ದ ಮರುಳಾರಾಧ್ಯರ ಅಂತ್ಯಕ್ರಿಯೆಗೆ ಸಾಮಾನ್ಯರಂತೆ ಬಂದಿದ್ದ ಶಿವಣ್ಣ, ಮರಳಿ ಸೆಂಟ್ರಲ್‌ ಕಾಲೇಜಿಗೆ ಬಂದಿದ್ದು ಸನ್ಯಾಸಿಯಾಗಿ. ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾದ ಶಿವಕುಮಾರ ಸ್ವಾಮೀಜಿಯಾಗಿ.

ಹೀಗೆ ಶಿವಣ್ಣ, ಶಿವಕುಮಾರ ಸ್ವಾಮೀಜಿಯಾಗಿ, ಸನ್ಯಾಸ ಸ್ವೀಕರಿಸಿಯೇ ಬಿಎ ಆನರ್ಸ್‌ ಮುಗಿಸಿದರು. ಬಿಎ ಪ್ರಥಮ ದರ್ಜೆಯಲ್ಲಿ ಮುಗಿಸಿದ ಶಿವಕುಮಾರ ಸ್ವಾಮೀಜಿ, ಮತ್ತೆ ಓದು ಮುಂದುವರೆಸಲಿಲ್ಲ. ಮುಂದೆ ನಡೆಸಿದ್ದು ತ್ರಿವಿದ ದಾಸೋಹ ಕೈಂಕರ್ಯ. ಸಿದ್ದಗಂಗಾ ಮಠದ ಕಾಯಕಯೋಗಿ ಕೆಲಸ.