ಪವಾಡದ ರೀತಿಯಲ್ಲಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ - ಸಿಎಂ ಹೆಚ್ಡಿಕೆ

ತುಮಕೂರು : ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಪವಾಡ ಎಂಬಂತ ರೀತಿಯಲ್ಲಿ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಶ್ರೀಗಳ ಆರೋಗ್ಯದಲ್ಲಿ ಚೇತರಿಗೆ ಕಂಡು ಬರುತ್ತಿದೆ. ಇದು ವೈದ್ಯರಿಗೇ ಪವಾಡ.
ಸಿದ್ದಗಂಗಾ ಶ್ರೀಗಳಲ್ಲಿರುವ ದೈವೀ ಶಕ್ತಿಯಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಶ್ರೀಗಳನ್ನು ವಿದೇಶಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳಿಸುವ ಅವಶ್ಯಕತೆ ಇಲ್ಲ ಎಂದರು.
https://youtu.be/LhUeLXiQ5LQ
ಇನ್ನೂ ಮುಂದುವರೆದು ಮಾತನಾಡಿದ ಅವರು, ವಿದೇಶದಲ್ಲಿ ಸಿಗುವ ಚಿಕಿತ್ಸಾ ಸೌಲಭ್ಯಗಳನ್ನು ಇಲ್ಲೇ ಸಿಗುವಂತೆ ಮಾಡಲಾಗಿದೆ. ಡಾ.ಪರಮೇಶ್ ನೇತೃತ್ವದ ತಜ್ಞ ವೈದ್ಯರ ತಂಡ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಟಿವಿ5 ಕನ್ನಡ ಸುದ್ದಿ ವಾಹಿನಿಯ ಅಭಿಯಾನವಾದ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ 2006ರಲ್ಲೇ ಶಿಫಾರಸ್ಸು ಮಾಡಿದ್ದೆ.
ಭಾರತ ರತ್ನ ಪ್ರಶಸ್ತಿ ಸಿಗಲಿ ಎನ್ನುವುದು ನಾಡಿದ ಎಲ್ಲಾ ಜನರು, ಭಕ್ತರ ಇಚ್ಛೆಯಾಗಿದೆ. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯೋದಷ್ಟೇ ಅಲ್ಲ, ಪ್ರಧಾನಿ ಭೇಟಿಯಾಗಿ ಪ್ರಶಸ್ತಿಗೆ ವಿನಂತಿಸುವುದಾಗಿ ತಿಳಿಸಿದರು.
ಅಲ್ಲದೇ.. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಸಿಗಲಿ ಎಂದು ಟಿವಿ5 ಕನ್ನಡ ನ್ಯೂಸ್, ಅಭಿಯಾನ ಮಾಡ್ತಿರೋದು ಅತ್ಯಂತ ಉತ್ತಮ ಕೆಲಸ ಎಂದು ಶ್ಲಾಘನೆ ವ್ಯಕ್ತಪಡಿಸಿದರು.