ಆರ್​ಜಿವಿ ವಿವಾದಾತ್ಮಕ ಸಿನಿಮಾದಲ್ಲಿ ಕನ್ನಡತಿ ಯಜ್ಞಾ ಶೆಟ್ಟಿ..!

ನೈಜ ಘಟನೆಗಳನ್ನು ತೆರೆಗೆ ತರೋದ್ರಲ್ಲಿ ವರ್ಮಾ ನಿಸ್ಸೀಮರು. ಸದ್ಯ ಲಕ್ಷ್ಮೀಸ್ ಎನ್​ಟಿಆರ್​ ಚಿತ್ರಕ್ಕೆ ಆರ್​ಜಿವಿ ಆಕ್ಷನ್ ಕಟ್ ಹೇಳ್ತಿದ್ದು, ಈ ಚಿತ್ರ ಭಾರೀ ಕುತೂಹಲ ಕೆರಳಿಸಿದೆ. ಆಂಧ್ರದ ಮಾಜಿ ಸಿಎಂ ಎನ್​ಟಿಆರ್​ ಸಾವಿನ ರಸಹ್ಯ ಬಿಚ್ಚಿಡ್ತೀನಿ ಅಂತ ವರ್ಮಾ ಹೇಳ್ತಿರೋದೇ ಲಕ್ಷ್ಮೀಸ್​​ ಎನ್​​ಟಿಆರ್ ಇಷ್ಟೊಂದು ಕುತೂಹಲ ಹುಟ್ಟಿಸೋಕೆ ಕಾರಣ.

ಈಗಾಗಲೇ ತೆಲುಗಿನ ಖ್ಯಾತ ನಟ, ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್​ಟಿಆರ್ ಬಯೋಪಿಕ್ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಚಿತ್ರವನ್ನ ಸ್ವತ: ಎನ್​ಟಿಆರ್ ಪುತ್ರ ಬಾಲಕೃಷ್ಣ ನಿರ್ಮಿಸಿ, ತಮ್ಮ ತಂದೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದ್ರೆ, ಈ ಬಯೋಪಿಕ್​​​ಗೆ ವಿರುದ್ಧವಾಗಿ ವರ್ಮಾ ಲಕ್ಷ್ಮೀಸ್ ಎನ್​ಟಿಆರ್ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ.. ಎನ್​ಟಿಆರ್ ಬಯೋಪಿಕ್​ನಲ್ಲಿ ಸತ್ಯಗಳನ್ನ ಬಚ್ಚಿಟ್ಟಿದ್ದಾರೆ.. ಅದನ್ನ ನನ್ನ ಸಿನಿಮಾದಲ್ಲಿ ಹೇಳ್ತೀನಿ ಅಂತಿದ್ದಾರೆ ವರ್ಮಾ.

ಟಿಟೌನ್​​​​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ಲಕ್ಷ್ಮೀಸ್ ಎನ್​ಟಿಆರ್

ಆರ್​ಜಿವಿ ವಿವಾದಾತ್ಮಕ ಸಿನಿಮಾದಲ್ಲಿ ಕನ್ನಡತಿ ಯಜ್ಞಾ ಶೆಟ್ಟಿ..!

ಎನ್​ಟಿಆರ್ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ. ಎನ್​ಟಿಆರ್ ಬದುಕಿನಲ್ಲಿ ಲಕ್ಷ್ಮೀ ಆಗಮನದ ನಂತ್ರ ಏನೆಲ್ಲಾ ಆಯ್ತು, ಎನ್​ಟಿಆರ್ ಕಡೆ ದಿನಗಳು ಹೇಗಿದ್ವು. ಆಪ್ತರೇ ಎನ್​ಟಿಆರ್​ ಬೆನ್ನಿಗೆ ಚೂರಿ ಹಾಕಿದ್ರಾ, ಇಂತಹ ಅಂಶಗಳನ್ನ ಆಧರಿಸಿ, ವರ್ಮಾ ಈ ಸಿನಿಮಾ ಕಟ್ಟಿಕೊಡ್ತಿದ್ದಾರೆ.. ಈ ಚಿತ್ರದಲ್ಲಿ ಲಕ್ಷ್ಮೀ ಪಾರ್ವತಿ ಪಾತ್ರವೇ ಹೈಲೆಟ್. ಇಡೀ ಕಥೆ ಲಕ್ಷ್ಮೀ ಪಾರ್ವತಿ ಸುತ್ತಾ ಸುತ್ತುತ್ತೆ. ಇಂತಹ ಮುಖ್ಯ ಪಾತ್ರದಲ್ಲಿ ಕನ್ನಡದ ನಟಿ ಯಜ್ಞಾ ಶೆಟ್ಟಿ ಬಣ್ಣ ಹಚ್ತಿರೋದು ವಿಶೇಷ.

ಯಜ್ಞಾ ಶೆಟ್ಟಿ, ನಟಿಸೋ ಸಿನಿಮಾಗಳ ಸಂಖ್ಯೆ ಕಡಿಮೆ ಇದ್ರೂ, ನಟನೆಗೆ ಅವಕಾಶ ಇರುವ ಪಾತ್ರಗಳನ್ನ ಆರಿಸಿಕೊಳ್ತಾರೆ. ಹಾಗ್​ ನೋಡಿದ್ರೆ, ವರ್ಮಾ ಸಿನಿಮಾದಲ್ಲಿ ಯಜ್ಞಾ ನಟಿಸ್ತಿರೋದು ಇದೇ ಮೊದಲಲ್ಲ.. ಈ ಹಿಂದೆ ವರ್ಮಾ ನಿರ್ದೇಶನದ ಸೂಪರ್ ಹಿಟ್ ಕಿಲ್ಲಿಂಗ್ ವೀರಪ್ಪನ್ ಸಿನಿಮಾದಲ್ಲಿ ವೀರಪ್ಪನ್ ಪತ್ನಿ ಮುತ್ತು ಲಕ್ಷ್ಮೀಯಾಗಿ ಅಬ್ಬರಿಸಿದ್ರು.. ಈಕೆಯ ಅಭಿನಯಕ್ಕೆ ಭರ್ಜರಿ ಪ್ರಶಂಸೆ ಸಹ ಸಿಕ್ಕಿತ್ತು.. ಅದೇ ಕಾರಣಕ್ಕೆ ಆರ್​ಜಿವಿ ಲಕ್ಷ್ಮೀಸ್ ಎನ್​ಟಿಆರ್ ಚಿತ್ರದ ಲಕ್ಷ್ಮೀ ಪಾರ್ವತಿ ಪಾತ್ರಕ್ಕೆ ಇವರನ್ನ ಆಯ್ಕೆ ಮಾಡ್ಕೊಂಡಿದ್ದಾರೆ..

ಲಕ್ಷ್ಮೀ ಎನ್​ಟಿಆರ್ ಚಿತ್ರದಲ್ಲಿ ಯಜ್ಞಾ ಶೆಟ್ಟಿ ನಟಿಸೋ ಸಂಗತಿಯನ್ನ ಸ್ವತ: ರಾಮ್​ಗೋಪಾಲ್ ವರ್ಮಾ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.. ಈಗಾಗಲೇ ಸ್ಕ್ರೀನ್​ ಟೆಸ್ಟ್ ಫೋಟೊಶೂಟ್​ ಸಹ ನಡೆದಿದೆ.. ಒಂದು ದೊಡ್ಡ ಸಿನಿಮಾ ಮೂಲಕ ಯಜ್ಞಾ ಶೆಟ್ಟಿ ಟಾಲಿವುಡ್​ನಲ್ಲಿ ಕಮಾಲ್ ಮಾಡೋಕೆ ಮುಂದಾಗಿದ್ದಾರೆ.. ಸದ್ಯ ಲಕ್ಷ್ಮೀ ಪಾರ್ವತಿ ಲುಕ್​ನಲ್ಲಿ ಯಜ್ಞಾಶೆಟ್ಟಿ ಭರವಸೆ ಮೂಡಿಸಿದ್ದಾರೆ.. ಇಂತಹ ಪಾತ್ರಗಳಿಗೆ ವರ್ಮಾ, ಆರಿಸಿಕೊಳ್ಳೊ ನಟಿಯರು ಸಂಚಲನ ಸೃಷ್ಟಿಸ್ತಾರೆ.. ಇದೀಗ ಯಜ್ಞಾ ಶೆಟ್ಟಿ ಟಾಲಿವುಡ್​​​​ನಲ್ಲಿ ಟಾಕ್​ ಆಫ್​ ದ ಟೌನ್ ಆಗಿದ್ದಾರೆ..

ವರ್ಮಾ ಸಿನಿಮಾದಲ್ಲಿ ಚಂದ್ರಬಾಬು ನಾಯ್ಡು ಯಾರು ಗೊತ್ತಾ..?

ಭಾರೀ ವಿವಾದ ಸೃಷ್ಟಿಸುತ್ತಾ ಲಕ್ಷ್ಮೀಸ್ ಎನ್​ಟಿಆರ್ ಸಿನಿಮಾ..?

ಈ ಸಿನಿಮಾದಲ್ಲಿ ಲಕ್ಷ್ಮಿ ಪಾರ್ವತಿ ರೀತಿಯಲ್ಲೇ ಚಂದ್ರಬಾಬು ನಾಯ್ಡು ಪಾತ್ರಕ್ಕೆ  ಪ್ರಾಮುಖ್ಯತೆಯಿದೆ.. ಎನ್​ಟಿಆರ್ ಅಳಿಯ, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ಕುರಿತು ವಿವಾದಾತ್ಮಕ ಅಂಶಗಳನ್ನ ವರ್ಮಾ ಈ ಚಿತ್ರದಲ್ಲಿ ಹೇಳ್ತಾರೆ ಅನ್ನಲಾಗ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ವಿವಾದಗಳು ಸುತ್ತಿಕೊಳ್ಳೊ ಸಾಧ್ಯತೆಯಿದೆ. ಚಿತ್ರದಲ್ಲಿ ಶ್ರೀತೇಜ್ ಚಂದ್ರಬಾಬು ನಾಯ್ಡು ಪಾತ್ರ ಮಾಡ್ತಿದ್ದಾರೆ..

ಲಕ್ಷ್ಮೀಸ್ ಎನ್​ಟಿಆರ್ ಶೂಟಿಂಗ್ ಭರದಿಂದ ಸಾಗ್ತಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರೋ ಸಾಧ್ಯತೆಯಿದೆ.. ವರ್ಮಾ ಸಿನಿಮಾದಲ್ಲಿ ಯಜ್ಞಾ ಶೆಟ್ಟಿ ನಟಿಸ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.. ಈ ಸಿನಿನಿಮಾ ಮುಂದೆ ಹೇಗೆಲ್ಲಾ ಸದ್ದು ಗದ್ದಲ ಮಾಡುತ್ತೆ ಅಂತ ಕಾದು ನೋಡ್ಬೇಕು.