ಅಂಬರೀಶ್ ನುಡಿನಮನ ಕಾರ್ಯಕ್ರಮದಲ್ಲಿ ರಾಕ್‌ಲೈನ್ ವೆಂಕಟೇಶ್ ಹೇಳಿದ್ದೇನು..?

ಚಿತ್ರರಂಗ ಮಾತ್ರ ಅಲ್ಲ ರಾಜಕೀಯ ಸೇರಿದಂತೆ ಹಲವು ಕ್ಷೇತ್ರದಲ್ಲಿ, ಅಂಬರೀಶ್ ಮಾಡಿದ ಕೆಲಸ ಸೂರ್ಯ ಚಂದ್ರ ಇರೋವರೆಗೂ ಮರೆಯೋಕಾಗಲ್ಲ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.

ಅಂಬರೀಶ್ ಶ್ರದ್ಧಾಂಜಲಿ ಸಭೆ

ಮಂಡ್ಯದಲ್ಲಿ ಅಂಬರೀಶ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಕಲಾವಿದರಿಗೆ ಸೂರೂ ಕಲ್ಪಿಸಲು ಅಂಬರೀಶ್ ನೆರವಾಗಿದರು, ಎಂತಹ ಸವಾಲು ಬಂದರೆ ಹೆದರಿಸುತ್ತಿದ್ದ ಅಂಬರೀಶ್, ಕನಗನಮರಡಿ ದುರಂತ     ನೋಡಿ ಮರುಗಿದ್ದಾರು, ಅವತ್ತು ನಾನು ಅವರ ಜತೆಗಿದ್ದೆ ಮೊದಲನೇ ಸಲ ಅವರು ಅಷ್ಟು ಮರುಗಿದ್ದನ್ನು ನೋಡಿದ್ದೆ ಎಂದು ಹೇಳಿದರು.

ವಿಶ್ವದಲ್ಲಿ ಯಾರೇ ಸತ್ರು ಇಷ್ಟು ಜನ ಬರಲು ಸಾಧ್ಯವೇ ಇಲ್ಲ

ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದಾಗ ಜನಸಾಗರವೇ ಬಂದು ಅಂತಿಮದರ್ಶನ ಪಡೆದಿತ್ತು, ಈ ವಿಶ್ವದಲ್ಲಿ ಯಾರೇ ಸತ್ರು ಇಷ್ಟು ಬರಲು ಸಾಧ್ಯವೇ ಇಲ್ಲ ಎಂದರು.