ಮಾಸ್ ಪ್ರೇಕ್ಷಕರಿಗೆ ಕಾದಿದೆ ಭರ್ಜರಿ ಆ್ಯಕ್ಷನ್ ಧಮಾಕ

ನಟ, ನಿರ್ಮಾಪಕನಾಗಿ ಸಕ್ಸಸ್ ಕಂಡಿರೋ ಸ್ಯಾಂಡಲ್​ವುಡ್ ಯಂಗ್ ಹೀರೋ ಅನೀಶ್ ತೇಜೇಶ್ವರ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಮಾರ್ಜುನ.  ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದ್ರ ಜೊತೆಗೆ ಅನೀಶ್ ಹೀರೋ ಆಗಿ ಅಬ್ಬರಿಸಿದ್ಧಾರೆ. ರಾಮಾರ್ಜುನ ಟೀಸರ್​​​ನಲ್ಲಿ ಬಹಳ ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮನಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಪಕ್ಕಾ ಕಮರ್ಷಿಯಲ್ ವಾಸು ಈಗ ಮಾಸ್ ‘ರಾಮಾರ್ಜುನ’

ಕಳೆದ ವರ್ಷ ವಾಸು, ನಾನ್​ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ಕಮಾಲ್ ಮಾಡಿದ ಅನೀಶ್, ಇದೀಗ ರಾಮಾರ್ಜುನ ಸಿನಿಮಾದಲ್ಲಿ ಅಬ್ಬರಿಸೋಕೆ ಬರ್ತಿದ್ದಾರೆ.. ಚಿತ್ರದಲ್ಲಿ ಅನೀಶ್ ತೇಜೇಶ್ವರ್ ಅರ್ಜುನ್​ ಅನ್ನೋ ಇನ್ಷೂರೆನ್ಸ್ ಏಜೆಂಟ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.. ಇನ್ಷೂರೆನ್ಸ್ ಮಾಡಿಸೋಕೆ ಜನರನ್ನ ಒಪ್ಪಿಸೋದೇ ಅರ್ಜುನ್ ಕೆಲಸ.. ಆದೇ ಕೆಲಸ ಅವನಿಗೆ ದೊಡ್ಡ ಪ್ರಾಬ್ಲಂ ಎದುರಾಗುವಂತೆ ಮಾಡುತ್ತೆ.. ಮುಂದೇನಾಗುತ್ತೆ ಅನ್ನೋದು ಈ ರಾಮಾರ್ಜುನ ಕಥೆ.

ಮಾಸ್ ಪ್ರೇಕ್ಷಕರಿಗೆ ಕಾದಿದೆ ಭರ್ಜರಿ ಆ್ಯಕ್ಷನ್ ಧಮಾಕ

ಮತ್ತೊಮ್ಮೆ ಅನೀಶ್ ಜೋಡಿಯಾಗಿ ನಿಶ್ವಿಕಾ ನಾಯ್ಡು

ರಾಮಾರ್ಜುನ ಟೀಸರ್​ ನೋಡ್ತಿದ್ರೆ, ಇದೊಂದು ಪಕ್ಕಾ  ಕಮರ್ಷಿಯಲ್ ಸಿನಿಮಾ ಅನ್ನೋದು ಗೊತ್ತಾಗುತ್ತೆ.. ಆ್ಯಕ್ಷನ್​​ ಪಂಚ್ ಕೊಂಚ ಜಾಸ್ತೀನೇ ಇರುತ್ತೆ ಅನ್ನೋದು ಟೀಸರ್ ನೋಡಿದ್ರೆ, ಗೊತ್ತಾಗಿ ಬಿಡತ್ತೆ.. ಅನೀಶ್​ ಈ ಸಿನಿಮಾದಲ್ಲಿ ಜಬರ್​ದಸ್ತ್​ ಆಕ್ಷನ್​ ಸೀಕ್ವೆನ್ಸ್​ನಲ್ಲಿ ಮಿಂಚಿದ್ದಾರೆ.

ವಾಸು ನಾನ್​ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅನೀಶ್ ಜೋಡಿಯಾಗಿ ಗಮನ ಸೆಳೆದಿದ್ರು.. ಒನ್ಸ್ ಅಗೇನ್ ನಿಶ್ವಿಕಾ, ರಾಮಾರ್ಜುನ ಸಿನಿಮಾದಲ್ಲೂ ಅನೀಶ್​​ಗೆ ಜೊತೆಯಾಗಿದ್ದಾರೆ.

ನಟನೆ ಜೊತೆ ನಿರ್ದೇಶನಕ್ಕಿಳಿದು ಅನೀಶ್ ತೇಜೇಶ್ವರ್ ಸಕ್ಸಸ್ ಕಾಣೋ ಹುಮ್ಮಸ್ಸಿನಲ್ಲಿದ್ದಾರೆ. ಸದ್ಯ ಶೂಟಿಂಗ್ ಭರದಿಂದ ಸಾಗಿದ್ದು, ಆದಷ್ಟು ಬೇಗ ತೆರೆಗೆ ಬರಲಿದೆ. ಹೀರೋ ಆಗಿ ಗೆದ್ದಿರೋ ಅನೀಶ್, ನಿರ್ದೇಶಕರಾಗಿ ಎಷ್ಟು ಅಂಕ ಗಿಟ್ಟಿಸ್ತಾರೆ ನೋಡ್ಬೇಕು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.