ಸಾಯುವ ವಿಡಿಯೋವಾದ್ರೂ ಲೈಕ್ ಮಾಡಿ, ಶೇರ್ ಮಾಡಿ ಪ್ಲೀಸ್

ಬದುಕಿದ್ದಾಗ ನನ್ನನ್ನು ಯಾರೂ ಲೈಕ್ ಮಾಡಿಲ್ಲ, ಸಾಯುವ ವಿಡಿಯೋವಾದರು ಲೈಕ್ ಮಾಡಿ, ಶೇರ್ ಮಾಡಿ ಎಂದು ಯಾಸ್ಮಿನ್ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರೆ.

ಮಾತ್ರೆ ಸೇವಿಸಿದ ದೃಶ್ಯ ಲೈವ್ ವೀಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿದ್ದು, ಯಾಸ್ಮಿನ್ ತಾಜ್ (18) ಮೃತ ದುರ್ದೈವಿ, ಜೆ.ಎಸ್.ಎಸ್.ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿ ಆಗಿತ್ತು, ಮೈಸೂರಿನ ಬನ್ನಿಮಂಟಪದ ಕಾವೇರಿ ನಗರದಲ್ಲಿ ಘಟನೆ ಸಂಭವಿಸಿದೆ.

ನನಗೆ ಆರೋಗ್ಯದ ಸಮಸ್ಯೆ ಇದೆ

ನನಗೆ ಓದು ತಲೆಗೆ ಹತ್ತಲಿಲ್ಲ, ನಾನೊಬ್ಬಳು ಡಲ್ ಸ್ಟೂಡೆಂಟ್, ಸಿಂಗರ್ ಅಥವಾ ಲಾಯರ್ ಆಗುವ ಆಸೆ ಇತ್ತು,
ದೇವರು ಈ ಆಸೆ ಪೂರೈಸಲಿಲ್ಲ, ನನಗೆ ಆರೋಗ್ಯದ ಸಮಸ್ಯೆ ಇದೆ, ಆದ್ದರಿಂದ ಕಾಲೇಜಿಗೆ ಸರಿಯಾಗಿ ಹೋಗಿಲ್ಲ. ಪ್ರಿಪರೇಟರಿ ಪರೀಕ್ಷೆಗೆ ಹಾಲ್ ಟಿಕೆಟ್ ಕೊಡಲಿಲ್ಲ. ಜೀವನಲ್ಲಿ ಏನೂ ಸಾಧಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ಕಣ್ಣೀರಿಟ್ಟು ಮಾತ್ರೆ ಸೇವಿಸಿದ ಯಾಸ್ಮಿನ್

ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡರು ಅಂತ ಪ್ರಪಂಚಕ್ಕೆ ತಿಳಿಸಿ ಎಂದು ಸಾಯುವ ಮುನ್ನ ವಿಡಿಯೋ ಮಾಡಿ ಮನವಿ ಮಾಡಿದ ಯಾಸ್ಮಿನ್ ತಾಜ್. ವಿಡಿಯೋದಲ್ಲಿ ಕಣ್ಣೀರಿಟ್ಟು ಮಾತ್ರೆಯನ್ನು ಸೇವಿಸಿದರು.

ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.