ಇದು ಕನ್ನಡ ಚಿತ್ರರಂಗದ ಮೊಟ್ಟ ಮೊದಲ 8ಡಿ ಸಾಂಗ್

ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದ ಬೀರ್ ಬಲ್ ಸಿನಿಮಾ ಟ್ರೈಲರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಿನಿಮಾ ರಿಲೀಸ್​​​ ಹೊಸ್ತಿಲಲ್ಲಿ ಟೈಟಲ್​ ಸಾಂಗ್​​ನ ರೋರಿಂಗ್ ಸ್ಟಾರ್ ಶ್ರೀಮುರಳಿ ರಿವೀಲ್ ಮಾಡಿದ್ದಾರೆ.

ವಜ್ರಮುನಿ ಅನ್ನೋ ಕಥೆ ಹೊತ್ತು ಮುಂದಿನ ವಾರ ಸಿನಿಮಾ ತೆರೆಗೆ

ಶ್ರೀನಿವಾಸ ಕಲ್ಯಾಣ ಸಿನಿಮಾ ಮಾಡಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ನಿರ್ದೇಶಕ, ನಟ ಶ್ರೀನಿ ಹೊಸ ಪ್ರಯತ್ನ ಬೀರ್​ಬಲ್. ಈ ಸಿನಿಮಾ ಮೂರು ಭಾಗಗಳಲ್ಲಿ ಮೂಡಿ ಬರಲಿದ್ದು, ಈ ಸಾಲಿಗೆ ಬೀರ್ ಬಲ್ ಕೇಸ್ ನಂ 1 : ಫೈಂಡಿಂಗ್ ವಜ್ರಮುನಿ ಅನ್ನೋ ಕಥೆ ಹೊತ್ತು ಮುಂದಿನ ವಾರ ಸಿನಿಮಾ ತೆರೆಗೆ ಬರ್ತಿದೆ.. ಈಗಾಗಲೇ ಸಿನಿಮಾ ಟ್ರೈಲರ್ ಮತ್ತು ಸಾಂಗ್ಸ್ ಎಲ್ಲರ ಗಮನ ಸೆಳೆದಿದೆ..

ಕ್ರಿಸ್ಟರ್ ಪಾರ್ಕ್ ಸಿನಿಮಾಸ್ ಬ್ಯಾನರ್​ನಲ್ಲಿ ಟಿ. ಆರ್ ಚಂದ್ರಶೇಖರ್ ಬೀರ್​ ಬಲ್ ಸಿನಿಮಾವನ್ನ ನಿರ್ಮಾಣ ಮಾಡಿದ್ಧಾರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಕಾಲಚರಣ್​ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರುಕ್ಮಿಣಿ ವಸಂತ್, ಕವಿತಾ ಚಿನ್ನು ಬೀರ್ ಬಲ್ ಸಿನಿಮಾದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ.

ಬೀರ್​ಬಲ್ಲನ ಗಾನ ಬಜಾನಕ್ಕೆ ಕೈ ಜೋಡಿಸಿದ ಶ್ರೀಮುರಳಿ..!

ಇದು ಕನ್ನಡ ಚಿತ್ರರಂಗದ ಮೊಟ್ಟ ಮೊದಲ 8ಡಿ ಸಾಂಗ್

ಬೀರ್​ ಬಲ್ ಸಿನಿಮಾ ಟೈಟಲ್​ ಸಾಂಗ್​ನ ರೋರಿಂಗ್ ಸ್ಟಾರ್ ಶ್ರೀಮುರಳಿ ರಿಲೀಸ್ ಮಾಡಿದ್ದಾರೆ. ಈ ಹಾಡಿನ ವಿಶೇಷ ಏನಪ್ಪಾ ಅಂದ್ರೆ, ಇದು ಕನ್ನಡದ ಮೊದಲ 8ಡಿ ಸಾಂಗ್. ಅಂದ್ರೆ 8 ಡಿ ಸೌಂಡ್​ ಸಿಸ್ಟಮ್​​ನ ಸಾಂಗ್. ಇತ್ತೀಚೆಗೆ ರಜಿನಿಕಾಂತ್ ಅಭಿನಯದ 2.O ಸಿನಿಮಾದಲ್ಲಿ ಇಂತಹ ಸೌಂಡ್ ಬಳಸಲಾಗಿತ್ತು. ಇದೀಗ ಬೀರ್​ಬಲ್ ಸಿನಿಮಾದಿಂದ 8ಡಿ ಸಿಸ್ಟಮ್​ ಕನ್ನಡ ಚಿತ್ರರಂಗಕ್ಕೆ ಬಂದಂತಾಗಿದೆ.

ಬೀರ್​ಬಲ್ ಸಿನಿಮಾ ರಿಲೀಸ್​ಗೀ ಮೊದ್ಲೆ ಹಿಂದಿ ಮತ್ತು ತಮಿಳಿನಿಂದ ರೀಮೇಕ್​ಗೆ ಬೇಡಿಕೆ ಬಂದಿದೆ. ಸಿನಿಮಾ ಟ್ರೈಲರ್ ನೋಡಿ ಮೆಚ್ಚಿಕೊಂಡಿರೋ ಪರಭಾಷಾ ಮೇಕರ್ಸ್​​​ ಬೀರ್​ಬಲ್ ಕಥೆ ಹಿಂದೆ ಬಿದ್ದಿದ್ದಾರೆ. ಈ ಬಗ್ಗೆ ಮಾತುಕತೆ ನಡೀತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ, ಪರಭಾಷೆಗಳಿಗೆ ಬೀರ್​ಬಲ್ ಸಿನಿಮಾ ರೀಮೇಕ್​ ಆಗಲಿದೆ.

ಈಗಾಗಲೇ ಬೀರ್​ಬಲ್ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದ್ದು, ಸಂಕ್ರಾಂತಿ ಸಂಭ್ರಮದಲ್ಲೇ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ. 100ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಜನವರಿ 18ಕ್ಕೆ ಬೀರ್​ಬಲ್ ದರ್ಬಾರ್ ಶುರುವಾಗಲಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.