ರಮೇಶ ಜಾರಕಿಹೊಳಿ ಬೆನ್ನಿಗೆ ನಿಂತ ಬಾಲಚಂದ್ರ ಜಾರಕಿಹೊಳಿ?

ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಸೇರಿ 13ಕ್ಕೂ ಅಧಿಕ ಶಾಸಕರ ರಾಜೀನಾಮೆ ಪರ್ವವನ್ನು ಶುರುಮಾಡಲಾಗಿದೆ, ಇನ್ನೂ ಬಿಜೆಪಿ ಚಾಣಕ್ಯ ಅಮಿತ್ ಶಾ ಸೂಚನೆಗೆ ಕಾಯುತ್ತಿದ್ದಾರೆ ಅತೃಪ್ತರು ಎನ್ನಲಾಗುತ್ತೀದೆ.

ದೆಹಲಿಯಲ್ಲಿಯೇ ರಮೇಶ್ ಜಾರಕಿಹೊಳಿ ಬಿಡುಬಿಟ್ಟಿದ್ದು, ರಮೇಶ ಬೆನ್ನಿಗೆ ಬಾಲಚಂದ್ರ ಜಾರಕಿಹೊಳಿ ನಿಂತಿದ್ದರೆ ರಮೇಶ ಜೊತೆಗೆ ಶಾಸಕರಾದ ಗಣೇಶ ಹುಕ್ಕೇರಿ ಹಾಗೂ ಮಹೇಶ ಕುಮಟೋಳ್ಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಅಥಣಿ ಶಾಸಕ ಮೊಬೈಲ್ ಸ್ವೀಚಾಪ್

ಕೆಲ ಅತೃಪ್ತ ಶಾಸಕರು ಮುಂಬೈನತ್ತ ಪ್ರಯಾಣ ಬೆಳಸಿದ್ದು, ಬಿಜೆಪಿ ಪ್ಲಾನ್ A ಮತ್ತು B ರಣತಂತ್ರ ಆರಂಭವಾಗಿದೆ.  ಮೊದಲ ಹಂತದಲ್ಲಿ ಪ್ಲ್ಯಾನ್ A ರಮೇಶ್ ಜಾರಕಿಹೊಳಿ ಟೀಂ ರಾಜೀನಾಮೆ. ಎರಡನೇ ಹಂತದಲ್ಲಿ B ಶಾಸಕರು ರಾಜೀನಾಮೆ. ಪ್ಲ್ಯಾನ್ B ಶಾಸಕರು ನೇರವಾಗಿ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದು. ಅಥಣಿ ಶಾಸಕ ಮೊಬೈಲ್ ಸ್ವೀಚಾಪ್ ಮಾಡಿದ್ದು, ಆವರ ನಡೆ ದೋಸ್ತಿ ಸರ್ಕಾರದ ಪತನ ಖಚಿತ ಎನ್ನುವ ಮೂಲವನ್ನು ಅತೃಪ್ತ ಶಾಸಕರು ನೀಡುತ್ತಿದ್ದಾರೆ.

ಸಂಕ್ರಾಂತಿ ಕ್ರಾಂತಿ ಖಚಿತ ಎನ್ನುವಂತೆ ಹಾಗಿದೆ. ಬಿಜೆಪಿಯವರು ಕೊಟ್ಟ ಡೇಡ್​ಲೈನ್ ಒಳಗೆ ಮೈತ್ರಿ ಸರ್ಕಾರವನ್ನು ಉರುಳಿಸುತ್ತಾರ ಕಾದುನೋಡಬೇಕಷ್ಟೇ.