ಗತ್ತಿಗೆ ಮತ್ತೊಂದು ಹೆಸರು ಅಂಬರೀಶ್: ನಟ ಯಶ್

ಮಂಡ್ಯ ಗತ್ತು ಜಗತ್ತಿಗೆ ಗೊತ್ತು ಅಂತಾರೆ, ಆ ಗತ್ತು ಅಂಬಿ ಸ್ವತ್ತು. ಗತ್ತಿಗೆ ಮತ್ತೊಂದು ಹೆಸರು ಅಂಬರೀಶ್ ಎಂದು ನಟ ಯಶ್ ಹೇಳಿದ್ದಾರೆ.

ಅಂಬರೀಶ್ ಇಲ್ಲ ಅಂತ ಬಾವಿಸೋದು ಬೇಡ,

ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯ ಜನ ರಾಜಕೀಯವಾಗಿ ಅಂಬಿಗೆ ಶಕ್ತಿ ತುಂಬಿದ್ದಾರೆ. ಅದ್ರಂತೆ ಅವರ ಮಂಡ್ಯ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅಂಬರೀಶ್ ಇಲ್ಲ ಅಂತ ಬಾವಿಸೋದು ಬೇಡ, ಅಂಬರೀಶ್ ಜಾಗವನ್ನ ಅವ್ರ ಪುತ್ರ ಅಭಿಷೇಕ್ ತುಂಬುತ್ತಾರೆ ಎಂದು ಯಶ್ ಮಾತನಾಡಿದರು.

ಡಿ ಬಾಸ್. ಡಿ ಬಾಸ್. ಎಂದು ಘೋಷಣೆ

ಕಾರ್ಯಕ್ರಮದ ವೇಳೆ ನಟ ಯಶ್ ಗೆ ಮುಜುಗರ ಉಂಟಾದ ಪ್ರಸಂಗ ನಡೆಯಿತ್ತು, ಯಶ್ ಭಾಷಣ ಆರಂಭಿಸುತ್ತಿದ್ದಂತೆ ಡಿ ಬಾಸ್. ಡಿ ಬಾಸ್. ಎಂದು ಘೋಷಣೆಯನ್ನು , ನಟ ದರ್ಶನ್ ಪರ ನೂರಾರು ಅಭಿಮಾನಿಗಳ ಘೋಷಣೆ ಕೂಗಿದರು.

ಇನ್ನೂ ಈ ವೇಳೆ ದರ್ಶನ್ ಪರ ಘೋಷಣೆಯಿಂದ ಯಶ್ ಗೆ ಮುಜುಗರ ಉಂಟಾಗಿದಂತ್ತು ಸುಳ್ಳಲ್ಲಾ,  ಮುಜುಗರದ ನಡುವೆಯೂ ಭಾಷಣವನ್ನು ನಟ ಯಶ್ ಮಾಡಿದರು.