ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗ್ತಿದ್ದಾರೆ ಯಶ್- ಕಿಚ್ಚ- ದಚ್ಚು..!

2018 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ವರ್ಷ. ಚಿತ್ರರಂಗದ ಹಲವು ಗಣ್ಯರು ನಮ್ಮನ್ನಗಲಿದ್ರು. ಅದ್ರಲ್ಲೂ ಚಿತ್ರರಂಗಕ್ಕೆ ಅಂಬಿಗನಾಗಿದ್ದ ಟ್ರಬಲ್​​ ಶೂಟರ್ ರೆಬೆಲ್ ಸ್ಟಾರ್ ಅಂಬಿ ಸಾವು ದಿಢೀರ್ ಆಘಾತ ನೀಡಿತ್ತು. ಇಂದು ಅಂಬಿ ನಮ್ಮೊಂದಿಗೆ ಇಲ್ಲದಿದ್ರು ಕೂಡ ಅವ್ರ ಹಸನಾದ ನೆನಪುಗಳು ನಮ್ಮ ಸ್ಮೃತಿಪಟಲದಲ್ಲಿವೆ. ಈಗ ಮಂಡ್ಯ ಜನತೆ ಮತ್ತೊಮ್ಮೆ ಅಂಬಿ ನೆನೆಯಲು ವೇದಿಕೆ ಸಿದ್ದವಾಗಿಸಿದೆ. ಈ ವೇದಿಕೆಯಲ್ಲಿ ಕಿಚ್ಚ, ದಚ್ಚು, ಯಶ್​​ ಕೂಡ ಭಾಗಿಯಾಗ್ತಿರೋದು ವಿಶೇಷ.

ಮಂಡ್ಯದಲ್ಲಿ ಅಂಬರೀಶ್​​ ನುಡಿ ನಮನ ಕಾರ್ಯಕ್ರಮ.!
2018 ನವೆಂಬರ್ 24 .ಕನ್ನಡ ಚಿತ್ರರಂಗಕ್ಕೆ ಕತ್ತಲು ಕವಿದ ದಿನ. ಮಂಡ್ಯದ ಗಂಡು,, ಮೇರು ನಟ ಕನ್ನಡಿಗರನ್ನ ಅಗಲಿದ ದಿನ. ಅಂಬಿ ನೆನೆಯುತ್ತಲೇ ದಿನ ದೂಡುತ್ತಿರೋ ಅವ್ರ ಅಭಿಮಾನಿಗಳು ಎಸ್ಪೆಷಲಿ ಮಂಡ್ಯ ಜನತೆ ಅಂಬಿ ಶ್ರದ್ದಾಂಜಲಿ ಸಭೆ ಕಾರ್ಯಕ್ರಮವನ್ನ ಮಂಡ್ಯದಲ್ಲಿ ಹಮ್ಮಿಕೊಂಡಿದ್ದಾರೆ. ಶ್ರದ್ದಾಂಜಲಿ ಸಭೆ ಜೊತೆಗೆ ನುಡಿ ನಮನ ಕಾರ್ಯಕ್ರಮವನ್ನು ಅಖಿಲ ಭಾರತ ಅಂಬಿ ಅಭಿಮಾನಿಗಳ ಸಂಘ ಮಂಡ್ಯದಲ್ಲಿ ಹಮ್ಮಿಕೊಂಡಿದ್ದು ದೊಡ್ಡದೊಂದು ವೇದಿಕೆ ಮಂಡ್ಯದಲ್ಲಿ ಸಿದ್ದವಾಗುತ್ತಿದೆ.

ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬಿ ಶ್ರದ್ದಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಅಂಬಿ ಅಭಿಮಾನಿಗಳು ಸಖಲ ಸಿದ್ದತೆಯಲ್ಲಿ ತೊಡಗಿದ್ದಾರೆ.ಇದಷ್ಟೇ ಅಲ್ಲ ನುಡಿ ನಮನ ಕಾರ್ಯಕ್ರಮದ ಜೊತೆ ಅಂಬಿ ಹೆಸರಿನಲ್ಲಿ ಆರ್ಥಿಕ ಸಹಾಯವನ್ನು ಕೂಡ ಮಾಡುವ ಮಾದರಿ ಕಾರ್ಯಕ್ರಮ ಇದಾಗಲಿದೆ.ಅಂಬಿ ಕುಟುಂಬ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗ್ತಿದ್ದಾರೆ ಯಶ್- ಕಿಚ್ಚ- ದಚ್ಚು..!
ಒಂದೇ ವೇದಿಕೆಯಲ್ಲಿ ಸ್ಯಾಂಡಲ್​ವುಡ್ ಸೂಪರ್ ಸ್ಟಾರ್ಸ್
ಒಂದು ಕಡೆ ಅಂಬಿ ನುಡಿ ನಮನ ಕಾರ್ಯಕ್ರಮವಾದ್ರೆ ಇನ್ನೊಂದು ಕಡೆ ಇದೇ ಕಾರ್ಯಕ್ರಮ ಚಿತ್ರರಂಗದ ಐತಿಹಾಸಿಕ ಕ್ಷಣಕ್ಕೂ ಮುನ್ನುಡಿ ಬರೆಯಲಿದೆ. ಈಗಾಗಲೇ ನಾವು ಹೇಳಿದಂತೆ ಈ ನುಡಿ ನಮನ ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸಲಿದ್ದು, ಇದ್ರ ಜೊತೆಗೆ ಚಿತ್ರರಂಗದ ಸ್ಟಾರ್ ನಟರಾದ ಯಶ್, ಸುದೀಪ, ದರ್ಶನ್​​ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಅನ್ನೋದು ದೊಡ್ಡ ವಿಶೇಷ.

ಮೂವರಿಗೂ ಅಂಬಿ ಅಂದ್ರೆ ಪಂಚ ಪ್ರಾಣ ಎಂದು ನಿಮ್ಗೆ ಸಹಜವಾಗಿ ಅನ್ನಿಸೋದು ಸಹಜ ಹಾಗೂ ಸಾಮಾನ್ಯ. ಆದ್ರೆ ವಿಶೇಷ ಇರೋದೆ ಇಲ್ಲಿ. ಎಸ್..ಯಶ್, ಸುದೀಪ, ದರ್ಶನ್​ ಇತ್ತೀಚಿನ ದಿನಗಳಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಕಡಿಮೆ.ಅಂಬಿ ಕೊನೆಯ ಯಾತ್ರೆ ಸಂದರ್ಭದಲ್ಲಾದ್ರು ಈ ಮೂವರು ಸೇರುತ್ತಾರೆ ಅನ್ನೋ ಆಸೆಯಲ್ಲಿದ್ರು.ಆದ್ರೆ ದರ್ಶನ್ ಹಾಗೂ ಯಶ್ ಮಾತ್ರ ಕಾಣಿಸಿಕೊಂಡಿದ್ರು.. ಈಗ ಅದೇ ಅಂಬಿಗಾಗಿ ವೇದಿಕೆ ಏರ್ತಿದ್ದಾರೆ.

ದರ್ಶನ್​, ಸುದೀಪ್ ನಡುವೆ ವೈಮನಸ್ಸು ಉಂಟಾಗಿ ಇಬ್ಬರೂ ನೀನೊಂದು ತೀರ, ನಾನೊಂದು ತೀರ ಅಂತಿದ್ದಾರೆ. ಯಶ್​- ದರ್ಶನ್​ ಫ್ಯಾನ್ಸ್ ವಾರ್ ಕೂಡ ದೊಡ್ಡದಾಗಿ ಸದ್ದು ಮಾಡ್ತಿದೆ. ಆದ್ರೆ, ಅದನ್ನೆಲ್ಲ ಬದಿಗಿಟ್ಟು, ಮೂವರು ಸೂಪರ್ ಸ್ಟಾರ್ಸ್ ಮಂಡ್ಯದಲ್ಲಿ ನಡೆಯುವ ಅಂಬಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದಾರೆ. ಶಿವಣ್ಣ, ಪುನೀತ್ ಕೂಡ ಇವರಿಗೆ ಸಾಥ್ ಕೊಡ್ತಿದ್ದಾರೆ.
ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5